ಬೆಳ್ತಂಗಡಿ: ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ರಿಕ್ಷಾ; ನಾಲ್ವರಿಗೆ ಗಾಯ

ಬೆಳ್ತಂಗಡಿ: ಲಾಯಿಲ ಪುತ್ರಬೈಲು ಸಮೀಪ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿಹೊಡೆದು ನಾಲ್ವರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ರಿಕ್ಷಾ ಚಾಲಕ ಪ್ರಮೋದ್ ಭೈರ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ರಿಕ್ಷಾದಲ್ಲಿದ್ದ ವಸಂತ ರಾಣಿ, ರಾಮಣ್ಣ ಪುತ್ರಬೈಲು, ರಾಮಪ್ಪ ಗಾಂಧೀನಗರ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪೋಲೀಸರು ಸ್ಧಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
Next Story





