ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಮುಂದೆ ವಿಷ ಸೇವಿಸಿದ್ದ ಮಹಿಳೆ ಮೃತ್ಯು

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಯ ಮುಂದೆ ಎಪ್ರಿಲ್ 6 ರಂದು ವಿಷ ಸೇವಿಸಿದ್ದ ಮಹಿಳೆಯೊಬ್ಬರು ಗುರುವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲವು ತಿಂಗಳ ಹಿಂದೆ ಪ್ರಾಕೃತಿಕ ವಿಕೋಪದಿಂದಾಗಿ ಧಾರವಾಡ ತಾಲ್ಲೂಕಿನ ಗರಾಗ್ ಗ್ರಾಮದಲ್ಲಿ ಮೃತ ಶ್ರೀದೇವಿ ವೀರಪ್ಪ ಕಮ್ಮರ್ (31) ಅವರ ಮನೆ ಕುಸಿದಿತ್ತು. ಇದಕ್ಕಾಗಿ 50,000 ರೂ.ಪರಿಹಾರವನ್ನು ನೀಡಲಾಗಿತ್ತು. ಇದು ಮನೆ ಮರು ನಿರ್ಮಿಸಲು ಸಾಕಾಗದು ಎಂದಿದ್ದ ಮಹಿಳೆ ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದರು. ಅದು ಈಡೇರದಿದ್ದಾಗ ಮಂಗಳವಾರ (ಎಪ್ರಿಲ್ 6) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಎ. 6 ರಂದು ಮಹಿಳೆಯು ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಅವರನ್ನು ಸಂಪರ್ಕಿಸಿದರು, ಅವರು ಮಹಿಳೆಯ ಸಮಸ್ಯೆಗಳನ್ನು ಪರಿಹರಿಸಲು ನಿರಾಕರಿಸಿದರು ಹಾಗೂ ಜೋಶಿಯನ್ನು ಸಂಪರ್ಕಿಸಲು ಸಲಹೆ ನೀಡಿದರು. ಜೋಶಿಯವರ ಮನೆಗೆ ಭೇಟಿ ನೀಡುವ ಮೊದಲು ಡೆತ್ ನೋಟ್ ಬರೆದು ಸಚಿವರ ಮನೆಯ ಮುಂದೆ ವಿಷ ಸೇವಿಸಿದ್ದರು.
ಮಹಿಳೆ ತನ್ನ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಳು.
ಮಹಿಳೆ ಈ ಹಿಂದೆ ಜೋಶಿಯನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ ಅಪಾಯಿಂಟ್ಮೆಂಟ್ ಪಡೆಯಲು ವಿಫಲವಾಗಿದ್ದರು. ಮಹಿಳೆ ಸಚಿವರನ್ನು ಭೇಟಿ ಮಾಡಲು ದಿಲ್ಲಿಗೂ ಹೋಗಿದ್ದರು.







