ಕುಟುಂಬ ವೈದ್ಯರ ಸಂಘಟನೆಯಿಂದ ವೈದ್ಯಕೀಯ ಕಾರ್ಯಾಗಾರ

ಮಂಗಳೂರು, ಎ.9: ಡಾ.ಮೋಹನ ದಾಸ್ ಭಂಡಾರಿಯ ನೇತೃತ್ವದಲ್ಲಿ 2003ರಲ್ಲಿ ಆರಂಭವಾದ ಮಂಗಳೂರಿನ ಕುಟುಂಬ ವೈದ್ಯರ ಸಂಘಟನೆಯ ವತಿಯಿಂದ ವೈದ್ಯಕೀಯ ಕಾರ್ಯಾಗಾರ ನಡೆಯಿತು. ಯೆನೆಪೋಯ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ.ದೀಪಕ್ ರೈ, ಹೃದ್ರೋಗ ತಜ್ಞ ಡಾ. ಕೃಷ್ಣಶೆಟ್ಟಿ ಕುಟುಂಬ ವೈದ್ಯರಿಗೆ ಕಾರ್ಯಾಗಾರ ನಡೆಸಿಕೊಟ್ಟರು.
ಈ ಸಂದರ್ಭ ಸಂಘದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಮತ್ತು ದ.ಕ. ಜಿಲ್ಲಾ ನಿವೃತ್ತ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಯೆನೆಪೊಯ ಆಸ್ಪತ್ರೆಯ ಡಾ. ಮುಹಮ್ಮದ್ ತಾಹಿರ್, ನಿರ್ಗಮನ ಅಧ್ಯಕ್ಷ ಡಾ.ಎಂಎ.ಆರ್. ಕುಡ್ವ, ನೂತನ ಅಧ್ಯಕ್ಷ ಡಾ. ಜಿ.ಕೆ. ಭಟ್ ಉಪಸ್ಥಿತರಿದ್ದರು.
ಸ್ಥಾಪಕ ಕಾರ್ಯದರ್ಶಿ ಡಾ. ಅಣ್ಣಯ್ಯ ಕುಲಾಲ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಡಾ ಶೇಖರ್ ಪೂಜಾರಿ ವಂದಿಸಿದರು.
Next Story





