ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸೇವೆಗಳು ಸೇವಾ ಸಿಂಧು ಯೋಜನೆ ವ್ಯಾಪ್ತಿಗೆ
ಬೆಂಗಳೂರು, ಎ.9: ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸ್ಮಾರಕಗಳ ಒಳ ಮತ್ತು ಹೊರ ಆವರಣಗಳಲ್ಲಿ ಚಲನಚಿತ್ರ, ಧಾರಾವಾಹಿ, ಸಾಕ್ಷ್ಯಚಿತ್ರ ಮತ್ತು ಇನ್ನಿತರೆ ಉದ್ದೇಶಗಳಿಗಾಗಿ ಚಿತ್ರೀಕರಣಕ್ಕೆ ಸೇವಾ ಸಿಂಧು ಯೋಜನೆಯಡಿ ಅನುಮತಿ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆಸಕ್ತರು ಚಿತ್ರೀಕರಣ ಮಾಡಲು ನಿಗದಿತ ಹಣ ಪಾವತಿಸಿ ಹಾಗೂ ಮುಂಗಡ ಹಣವನ್ನು ಭರಿಸಿದ ನಂತರ 7 ದಿನಗಳ ಕಾಲಮಿತಿಯೊಳಗೆ ಚಿತ್ರೀಕರಣಕ್ಕೆ ಅನುಮತಿ ಪಡೆಯಬಹುದು. ಪುರಾತತ್ವ ಇಲಾಖೆಯ ಈ ಸೇವೆಯನ್ನು ಚಲನಚಿತ್ರೋದ್ಯಮ, ಧಾರಾವಾಹಿ ನಿರ್ಮಾಣಗಾರರು ಮತ್ತು ಸಾಕ್ಷ್ಯಚಿತ್ರ ನಿರ್ಮಾಣಗಾರರು ಬಳಸಿಕೊಳ್ಳಲು ನಿಯಮವನ್ನು ಸರಳೀಕರಣಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





