ರಾಜ್ಯಾದ್ಯಂತ ಇಂದು 6,955 ಕೊರೋನ ಪ್ರಕರಣಗಳು ದೃಢ: 36 ಸೋಂಕಿತರು ಸಾವು

ಬೆಂಗಳೂರು, ಎ.10: ರಾಜ್ಯಾದ್ಯಂತ ಶನಿವಾರ 6,955 ಕೊರೋನ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 36 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 3,350 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೋವಿಡ್ ಸಾವಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ 19 ಮಂದಿ, ಬಳ್ಳಾರಿ-1, ಬೀದರ್-2, ಚಾಮರಾಜನಗರ-1, ಧಾರವಾಡ-2, ಹಾಸನ-1, ಕಲಬುರಗಿ-2, ಮೈಸೂರು-5, ತುಮಕೂರು-2, ಉತ್ತರ ಕನ್ನಡ-1 ಸಾವಿನ ಪ್ರಕರಣ ದೃಢಪಟ್ಟಿದೆ.
ಇಲ್ಲಿಯವರೆಗೂ ರಾಜ್ಯಾದ್ಯಂತ ಒಟ್ಟು 10,55,040 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 12,849 ಮಂದಿ ಸಾವನ್ನಪ್ಪಿದ್ದಾರೆ. ಇವತ್ತು ಸೇರಿದಂತೆ ರಾಜ್ಯದಲ್ಲಿ 61,653 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೇರ್‍ಸೆಂಟರ್ ಹಾಗೂ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ ಸೋಂಕಿತರ ವಿವರ: ಬಾಗಲಕೋಟೆ-44, ಬಳ್ಳಾರಿ-62, ಬೆಳಗಾವಿ-75, ಬೆಂಗಳೂರು ಗ್ರಾಮಾಂತರ-152, ಬೆಂಗಳೂರು ನಗರ-4,384, ಬೀದರ್-215, ಚಾಮರಾಜನಗರ-35, ಚಿಕ್ಕಬಳ್ಳಾಪುರ-74, ಚಿಕ್ಕಮಗಳೂರು-36, ಚಿತ್ರದುರ್ಗ-59, ದಕ್ಷಿಣ ಕನ್ನಡ-137, ದಾವಣಗೆರೆ-49, ಧಾರವಾಡ-88, ಗದಗ-17, ಹಾಸನ-100, ಹಾವೇರಿ-16, ಕಲಬುರಗಿ-276, ಕೊಡಗು-20, ಕೋಲಾರ-28, ಮಂಡ್ಯ-119, ಮೈಸೂರು-266, ರಾಯಚೂರು-30, ರಾಮನಗರ-72, ಶಿವಮೊಗ್ಗ-47, ತುಮಕೂರು-206, ಉಡುಪಿ-68, ಉತ್ತರ ಕನ್ನಡ-64, ವಿಜಯಪುರ-71, ಯಾದಗಿರಿ-24 ಸೋಂಕಿತ ಪ್ರಕರಣ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಶನಿವಾರ 4,384 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 2,027 ಮಂದಿ ಸೋಂಕಿನಿಂದ,ಗುಣಮುಖರಾಗಿದ್ದಾರೆ. ಇಂದು(ಎ.10) ಸೇರಿದಂತೆ ನಗರದಲ್ಲಿ,ಒಟ್ಟು 44,863 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೇರ್ ಸೆಂಟರ್ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.







