ದಿಲ್ಲಿ: ಗುಡಿಸಲುಗಳಲ್ಲಿ ಬೆಂಕಿ, ಇಬ್ಬರು ಮಕ್ಕಳು ಮೃತ್ಯು

ಹೊಸದಿಲ್ಲಿ: ನೋಯ್ಡಾದ ಸೆಕ್ಟರ್ 63 ಬಳಿ ರವಿವಾರ ಸುಮಾರು 150 ಗುಡಿಸಲುಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಬೆಂಕಿ ಅನಾಹುತಕ್ಕೆ ಮೂರು ವರ್ಷದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು NDTVಗೆ ತಿಳಿಸಿದ್ದಾರೆ.
ನೋಯ್ಡಾದ ಬಹಲೋಲ್ಪುರ್ ಗ್ರಾಮ ಪ್ರದೇಶದಲ್ಲಿ ಹಲವಾರು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಗೌತಮ್ ಬುದ್ಧ ನಗರ (ನೋಯ್ಡಾ ಪೊಲೀಸ್) ಪೊಲೀಸ್ ಆಯುಕ್ತರ ಅಧಿಕೃತ ಟ್ವಿಟರ್ ಖಾತೆ ಪೋಸ್ಟ್ ಮಾಡಿದೆ.
Next Story





