ಕಾಸರಗೋಡಿನಲ್ಲಿ ಮೊಟ್ಟಮೊದಲ ಸಂಕೀರ್ಣ ತೆರೆದ ಹೃದಯ ಶಸ್ತ್ರಚಿಕಿತ್ಸೆ

ಮಂಗಳೂರು : ಕಾಸರಗೋಡಿನ ಮೈತ್ರಾ ಯುನೈಟೆಡ್ ಹಾರ್ಟ್ ಸೆಂಟರ್ (ಎಂಯುಎಚ್‍ಸಿ), ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ಸಂಕೀರ್ಣ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ 50 ವರ್ಷ ಮೇಲ್ಪಟ್ಟ ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಡಾ.ಮುರಳಿ ವೆಟ್ಟಥ್ ಮತ್ತು ಡಾ.ಬಾಬುರಾಜನ್ ಎ.ಕೆ.ನೇತೃತ್ವದ ತಜ್ಞ ವೈದ್ಯರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.
ಮೈತ್ರಾ ಯುನೈಟೆಡ್ ಹಾರ್ಟ್ ಸೆಂಟರ್, ಸಮಗ್ರ ಹೃದ್ರೋಗ ಸೇವೆ ಮತ್ತು ಹೃದಯ ಶಸ್ತ್ರಚಿಕಿತ್ಸಾ ಸೌಲಭ್ಯ ನೀಡುವ ಕಾಸರಗೋಡು ಜಿಲ್ಲೆಯ ಮೊಟ್ಟಮೊದಲ ಆಸ್ಪತ್ರೆ ಎನಿಸಿದೆ. ಅತ್ಯಾಧುನಿಕ ಕ್ಯಾಥ್‍ಲ್ಯಾಬ್, ಸುಸಜ್ಜಿತ ಹೃದಯ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ಸಮಗ್ರ ಹೃದಯ ಆರೋಗ್ಯ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಸಂಸ್ಥೆ ಬದ್ಧವಾಗಿದೆ ಎಂದು ಮೈತ್ರಾ ಆಸ್ಪತ್ರೆಯ ಅಧ್ಯಕ್ಷ ಫೈಝಲ್ ಇ.ಕೊತ್ತಿಕೊಲ್ಲೋನ್ ಹೇಳಿದ್ದಾರೆ.
ಹೃದಯ ಬಡಿತದಲ್ಲಿ ಸಂಕೀರ್ಣ ಸಮಸ್ಯೆಗಳಿದ್ದ 57 ಹಾಗೂ 53 ವರ್ಷದ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಅಲ್ಪಾವಧಿಯಲ್ಲೇ ಈ ಸವಾಲುದಾಯಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ತೃಪ್ತಿ ತಂದಿದೆ. ಇದರಿಂದ ಜನತೆಗೆ ತಮ್ಮ ಮನೆಬಾಗಿಲಲ್ಲೇ ವಿಶ್ವದರ್ಜೆಯ ಸೌಲಭ್ಯ ದೊರಕಿದಂತಾಗಿದೆ ಎಂದು ಹೃದ್ರೋಗ ಶಸ್ತ್ರಚಿಕಿತ್ಸೆ ವಿಭಾಗದ ಅಧ್ಯಕ್ಷ ಡಾ.ಮುರಳಿ ವೆಟ್ಟಥ್ ಹೇಳಿದ್ದಾರೆ.
ತಜ್ಞ ವೈದ್ಯರಾದ ಡಾ.ವಿವೇಕ್ ಪಿಳ್ಳೈ ನೇತೃತ್ವದ ತಂಡ ಆ್ಯಂಜಿಯೋಗ್ರಾಮ್, ಆ್ಯಂಜಿಯೋಪ್ಲಾಸ್ಟಿ ಸೇರಿದಂತೆ ಸಮಗ್ರ ಹೃದಯ ಆರೋಗ್ಯ ಸೇವೆಗಳನ್ನು ದಿನದ 24 ಗಂಟೆಯೂ ಒದಗಿಸಲು ಸಜ್ಜಾಗಿದೆ. ಇದರಿಂದ ಕಾಸರಗೋಡು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಜನತೆ ಉತ್ತಮ ಹೃದ್ರೋಗ ಸೇವೆಗಳಿಗಾಗಿ ಇತರ ಜಿಲ್ಲೆಗಳಿಗೆ ಹೋಗಬೇಕಾದ ಅನಿವಾರ್ಯತೆ ತಪ್ಪಲಿದೆ ಎಂದು ವಿವರಿಸಿದ್ದಾರೆ.
"ವಿಶ್ವದರ್ಜೆಯ ಆರೋಗ್ಯಸೇವೆ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಮೈತ್ರಾ ಆಸ್ಪತ್ರೆ ಆರಂಭಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ತುರ್ತು ಸಂದರ್ಭದಲ್ಲಿ ಕಾಸರಗೋಡಿನಂಥ ಪ್ರದೇಶಗಳಿಂದ ದೂರದ ಊರುಗಳಿಗೆ ರೋಗಿಗಳನ್ನು ಕರೆದೊಯ್ಯು ವಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಕಂಡು ಮೊಟ್ಟಮೊದಲು ಮೈತ್ರಾ ಕೇರ್ ನೆಟ್‍ವರ್ಕ್ ಆಸ್ಪತ್ರೆಯನ್ನು ಕಾಸರಗೋಡಿನಲ್ಲಿ ಆರಂಭಿ ಸಲು ನಿರ್ಧರಿಸಲಾಯಿತು. ಇದು ಜಿಲ್ಲೆಯ ಮೊಟ್ಟಮೊದಲ ಸಮಗ್ರ ಹೃದ್ರೋಗ ಕೇಂದ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಪಾವಧಿಯಲ್ಲೇ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯವನ್ನು ಇಲ್ಲಿನ ಜನತೆಗೆ ಕಲ್ಪಿಸಿಕೊಡುವ ಮೂಲಕ ಈ ಭಾಗದ ಜನತೆಯ ಬಹುಕಾಲದ ಕನಸು ನನಸಾಗಿದೆ. ಉತ್ತಮ ಪ್ರಾಥಮಿಕ, ಎರಡನೇ ಹಾಗೂ ಮೂರನೇ ಹಂತದ ಸಮಗ್ರ ಸೇವೆಯ ಕನಸು ನನಸಾಗುವಲ್ಲಿ ಇದು ಮೊದಲ ಹಂತವಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ವಿಸ್ತøತ ಹಾಗೂ ಸಮಗ್ರ ಸೇವೆಗಳನ್ನು ಆಸ್ಪತ್ರೆ ಒದಗಿಸಲಿದೆ ಎಂದು ಹೃದ್ರೋಗ ವಿಭಾಗದ ನಿರ್ದೇಶಕ ಡಾ.ಅಲಿ ಫೈಝಲ್ ಹೇಳಿದ್ದಾರೆ.
ಎರಡು ತೆರೆದ ಹೃದಯ ಶಸ್ತ್ರಚಿಕಿತ್ಸೆಗಳ ಜತೆ, ಆರು ಪ್ರಾಥಮಿಕ ಆ್ಯಂಜಿಯೋಪ್ಲಾಸ್ಟಿ ಹಾಗೂ ಅಷ್ಟೇ ಸಂಖ್ಯೆಯ ಎಲೆವೇಟಿವ್ ಆಂಜಿಯೋಪ್ಲಾಸ್ಟಿಗಳನ್ನು ಒಂದು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಪೂರೈಸಲಾಗಿದೆ. ಇದು ಕಾಸರಗೋಡು ಜಿಲ್ಲೆಯ ಆರೋಗ್ಯ ಸೇವಾ ಇತಿಹಾಸದಲ್ಲಿ ಮೈಲುಗಲ್ಲು ಎಂದು ಹೃದ್ರೋಗ ವಿಭಾಗದ ಅಧ್ಯಕ್ಷ ಡಾ.ಆಶೀಶ್ ಕುಮಾರ್ ಬಣ್ಣಿಸಿದ್ದಾರೆ.







