ಉಡುಪಿ: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಮನೆ ಹಸ್ತಾಂತರ

ಉಡುಪಿ, ಎ.11: ಜಮಾತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಸಮಾಜ ಸೇವಾ ವಿಭಾಗದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬ ಗಳಿಗೆ ನಿರ್ಮಿಸಿ ಕೊಡುತ್ತಿರುವ 20ನೆ ಮನೆಯನ್ನು ಕೆಮ್ಮಣ್ಣು ತಾಳೆಹಿತ್ಲುವಿನ ಬಡ ಕೊರಗ ಸಮುದಾಯದ ಕುಟುಂಬಕ್ಕೆ ಶನಿವಾರ ಹಸ್ತಾಂತರಿಸಲಾಯಿತು.
ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಡಾ.ತಾಹ ಮತೀನ್ ಫಲಾನುಭವಿ ಲತಾ ಅವರಿಗೆ ಕೀಲಿ ಕೈ ಹಸ್ತಾಂತರಿಸಿದರು. ಮುಖ್ಯ ಅತಿಥಿ ಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ಪ್ರೊ.ಡಾ.ಅಬ್ದುಲ್ ಅಝೀಝ್ ಶುಭ ಹಾರೈಸಿದರು. ಜಮಾತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯಿದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಇದ್ರಿಸ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ದಲಿತ ದಮನಿತ ಹೋರಾಟ ಸಮಿತಿ ಸಂಚಾಲಕ ಶ್ಯಾಮ್ರಾಜ್ ಬಿರ್ತಿ, ತೋನ್ಸೆ ಗ್ರಾಪಂ ಕಾರ್ಯದರ್ಶಿ ದಿನಕರ, ಗ್ರಾಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಸದಸ್ಯರಾದ ಸಂಧ್ಯಾ, ವಿಜಯ, ಮಮ್ತಾಝ್, ಸುಝಾನ್, ಕುಸುಮ, ವತ್ಸಲ, ಹೈದರ್ ಅಲಿ, ಡಾ.ಫಹೀಮ್ ಅಬ್ದುಲ್ಲಾ, ಮಾಜಿ ಅಧ್ಯಕ್ಷೆ ಫೌಝೀಯಾ ಸಾದಿಕ್, ಮಾಜಿ ಉಪಾಧ್ಯಕ್ಷ ಉಸ್ತಾದ್ ಸಾದೀಕ್, ಎಸ್‌ಐಓ ಹೂಡೆ ಘಟಕಾಧ್ಯಕ್ಷ ವಸೀಮ್, ಎಚ್‌ಆರ್‌ಎಸ್‌ನ ಹಸನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.







