ಟ್ವಿಟರ್ ಪೋಸ್ಟ್ ನಲ್ಲಿ ಸಶಸ್ತ್ರ ಪಡೆಗಳ ಚಿತ್ರ ಬಳಕೆ ಸಮರ್ಥಿಸಿದ ಚುನಾವಣಾ ಆಯೋಗ
ತನ್ನದೇ ನಿಯಮ ಉಲ್ಲಂಘನೆ
ಹೊಸದಿಲ್ಲಿ: ಬಂಗಾಳ ಚುನಾವಣೆಯ ಅಂತಿಮ ಹಂತಗಳಲ್ಲಿ ಮತ ಚಲಾಯಿಸುವಂತೆ ಅರ್ಹ ನಾಗರಿಕರನ್ನು ಒತ್ತಾಯಿಸುವ ಟ್ವಿಟರ್ ಪೋಸ್ಟ್ ನಲ್ಲಿ ಸಶಸ್ತ್ರ ಪಡೆಗಳ ಚಿತ್ರದ ಬಳಕೆಯನ್ನು ಚುನಾವಣಾ ಆಯೋಗವು ಸಮರ್ಥಿಸಿಕೊಂಡಿದೆ ಈ ಮೂಲಕ ತನ್ನದೇ ನಿಯಮವನ್ನು ಉಲ್ಲಂಘಿಸಿದೆ.
ಚುನಾವಣಾ ಪ್ರಚಾರದಲ್ಲಿ ಸಶಸ್ತ್ರ ಪಡೆಗಳ ಚಿತ್ರವನ್ನು ಬಳಸಬಾರದು ಎಂಬ ಎಚ್ಚರಿಕೆ ನೀಡುವ ಮಾದರಿ ಸಂಹಿತೆಯು ರಾಜಕೀಯ ಪಕ್ಷಗಳಿಗೆ, ಪಕ್ಷಗಳ ಚುನಾವಣಾ ರಣತಂತ್ರ ರೂಪಿಸುವವರಿಗೆ ಹಾಗೂ ಕೆಲವು ವಸ್ತುಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ನಿಯಮ ಈ ಸಂದರ್ಭದಲ್ಲಿ ಅನ್ವಯಿಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಮತದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ತನ್ನ ಟ್ವೀಟಿನ ಉದ್ದೇಶ ಎಂದು ಆಯೋಗ ತಿಳಿಸಿದೆ.
ಜಾಹೀರಾತನ್ನು ದಯಮಾಡಿ ಸರಿಯಾಗಿ ನೋಡಿ ... ರಾಷ್ಟ್ರಕ್ಕಾಗಿ ಹೋರಾಡುವ ರಕ್ಷಣಾ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ನೀಡಲು ಸಾಧ್ಯವಾದರೆ, ಮತದಾರರು ತಮ್ಮ ಮನೆ ಗಳಿಂದ ಹೊರಬಂದು ಮತದಾನ ಕೇಂದ್ರಕ್ಕೆ ತೆರಳಿ ಮುಕ್ತವಾಗಿ ಹಾಗೂ ನಿರ್ಭಯವಾಗಿ ಮತ ಚಲಾಯಿಸಬಾರದೇಕೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಲಾಗಿದೆ ಎಂದು ಆಯೋಗ ತಿಳಿಸಿದೆ.
ಆಯೋಗದ ಟ್ವಿಟರ್ ಪೋಸ್ಟರ್ ನಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ 'ಸಾಮಾನ್ಯ ವ್ಯಕ್ತಿ' ಹೂಗುಚ್ಚದೊಂದಿಗೆ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಾರೆ: "ಮತವು ನಿಮ್ಮ ಹಕ್ಕು ಮಾತ್ರವಲ್ಲ, ನಿಮ್ಮ ಕರ್ತವ್ಯವೂ ಆಗಿದೆ. ನಿಮ್ಮ ಮತವನ್ನು ನಿರ್ಭಯವಾಗಿ ಚಲಾಯಿಸಿ" ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಮತದಾನದ ಸಮಯದಲ್ಲಿ ಸಶಸ್ತ್ರ ಪಡೆಗಳ ಉಲ್ಲೇಖ ಮಾಡುವುದನ್ನು ಇಬ್ಬರು ಚುನಾವಣಾ ಆಯೋಗದ ಸಲಹೆಗಾರರು ನಿರ್ಬಂಧಿಸಿದ್ದರು. ಮಾರ್ಚ್ 2019 ರಲ್ಲಿ ಲೋಕಸಭಾ ಚುನಾವಣೆ ಪ್ರಾರಂಭವಾಗುವ ಕೆಲವು ವಾರಗಳ ಮೊದಲು ಈ ನಿರ್ಬಂಧ ವಿಧಿಸಲಾಗಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಅವರ ಚಿತ್ರದ ಜೊತೆಗೆ ಯೋಧ ಅಭಿನಂದನ್ ಅವರ ಚಿತ್ರವಿರುವ ರಾಜಕೀಯ ಪೋಸ್ಟರ್ ಅನ್ನು ಬಿಜೆಪಿಯ ಬೆಂಬಲಿಗ ಹಾಕಿದ್ದ. ಇದನ್ನು ಯೋಗೇಂದ್ರ ಯಾದವ್ ಪ್ರಶ್ನಿಸಿದ್ದರು.
#govote #BeAnEthicalVoter #NoVoterToBeLeftBehind #AssemblyElections2021 #ElectionCommissionOfIndia #ECI pic.twitter.com/qtuWzOCWpF
— Election Commission of India #SVEEP (@ECISVEEP) April 10, 2021