ದ.ಕ.ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ
ಮಂಗಳೂರು, ಎ.11: ದ.ಕ.ಜಿಲ್ಲೆಯ ಹಲವು ಕಡೆ ರವಿವಾರ ರಾತ್ರಿ ಭಾರೀ ಮತ್ತು ಕೆಲವು ಕಡೆ ಸಾಧಾರಣ ಮಳೆಯಾಗಿದೆ.
ಮೂಡುಬಿದಿರೆ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದರೆ, ಮಂಗಳೂರು ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಗುಡುಗು, ಮಿಂಚು, ಸಿಡಿಲು ಸಹಿತ ಮಳೆ ಸುರಿಯಿತು. ಕೆಲವು ದಿನಗಳ ಹಿಂದೆಯೂ ದ.ಕ.ಜಿಲ್ಲಾದ್ಯಂತ ಭಾರೀ ಮಳೆ ಸುರಿದಿತ್ತು.
ಕೆಲಕಾಲ ಬಿಡುವು ಪಡೆದ ಮಳೆಯು ರವಿವಾರ ರಾತ್ರಿ ಮತ್ತೆ ಸುರಿಯಿತು. ಮಂಗಳೂರು ಸಹಿತ ಜಿಲ್ಲೆಯ ನಾನಾ ಕಡೆ ತೀವ್ರ ಸೆಕೆಯ ಮಧ್ಯೆ ರಾತ್ರಿ ಸುರಿದ ಮಳೆಯು ತಣ್ಣಗಿನ ವಾತಾವರಣ ಸೃಷ್ಟಿಸಿತು. ಎ.14ರವರೆಗೂ ಕರಾವಳಿಯ ಹಲವು ಕಡೆ ಭಾರೀ ಮತ್ತು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
Next Story





