ಜೊತೆಯಾಗಿ ಕಾಣಿಸಿಕೊಂಡ ಜೋರ್ಡಾನ್ ದೊರೆ, ಮಲ ಸಹೋದರ ಹಂಝಾ
ಅಮ್ಮಾನ್ (ಜೋರ್ಡಾನ್), ಎ. 11: ಜೋರ್ಡಾನ್ ದೊರೆ ಅಬ್ದುಲ್ಲಾ ಮತ್ತು ಅವರ ಮಲ ಸಹೋದರ ರಾಜಕುಮಾರ ಹಂಝಾ ರವಿವಾರ ಜೊತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರು ಎಂದು ಸರಕಾರಿ ಟಿವಿ ವರದಿ ಮಾಡಿದೆ. ಇದು ಅರಮನೆಯಲ್ಲಿ ಇತ್ತೀಚೆಗೆ ಬಿಕ್ಕಟ್ಟು ಕಾಣಿಸಿಕೊಂಡ ಬಳಿಕ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಮೊದಲ ಬಾರಿಯಾಗಿದೆ.
ಜೋರ್ಡಾನ್ ದೇಶ ಸ್ಥಾಪನೆಯಾದ 100ನೇ ವರ್ಷದ ಸಂದರ್ಭದಲ್ಲಿ ದೊರೆ, ಅವರ ಮಲಸಹೋದರ ಮತ್ತು ಇತರ ರಾಜವಂಶಸ್ಥರ ಗುಂಪೊಂದು ತಮ್ಮ ಪೂರ್ವಜರ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿರುವುದನ್ನು ಟಿವಿ ತೋರಿಸಿದೆ.
ಅರಮನೆಯ ಟ್ವಿಟರ್ ಖಾತೆಯಿಂದಲೂ ಅವರ ಭೇಟಿಯ ಬಗ್ಗೆ ಟ್ವೀಟ್ ಮಾಡಲಾಗಿದೆ.
Next Story