ಬೈಕಂಪಾಡಿಯಲ್ಲಿ ವಲಸೆ ಕಾರ್ಮಿಕನ ಕೊಲೆ ?

ಮಂಗಳೂರು : ಬೈಕಂಪಾಡಿಯ ರೈಲು ಹಳಿಯಲ್ಲಿ ವಲಸೆ ಕಾರ್ಮಿಕರೋರ್ವರ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಯಲ್ಲಪ್ಪ (47) ಎಂದು ಗುರುತಿಸಲಾಗಿದೆ.
ಯಲ್ಲಪ್ಪ ಅವರ ಕುತ್ತಿಗೆಯಲ್ಲಿ ಗಾಯ ಕಂಡು ಬಂದಿದ್ದು, ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಪಣಂಬೂರು ಪೊಲೀಸರು, ಬೆರಳಚ್ಚು ತಜ್ಞರು ಮತ್ತು ಶ್ವಾನದಳದೊಂದಿಗೆ ಸ್ಥಳಕ್ಕೆ ಹಾಜರಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
Next Story





