ವಾರಣಾಸಿ ಕೋರ್ಟ್ ನೀಡಿದ ಆದೇಶ ಸಾರ್ವಜನಿಕ ಸುವ್ಯವಸ್ಥೆ, ಕಾನೂನು ನಿಯಮಕ್ಕೆ ಬೆದರಿಕೆ: ಪಾಪ್ಯುಲರ್ ಫ್ರಂಟ್
ಗ್ಯಾನ್ ವ್ಯಾಪಿ ಮಸ್ಜಿದ್ ನಲ್ಲಿ ಪುರಾತತ್ವ ಇಲಾಖೆ ಸಮೀಕ್ಷೆ
ಮಂಗಳೂರು : ಗ್ಯಾನ್ ವ್ಯಾಪಿ ಮಸೀದಿಯಲ್ಲಿ ಭೌತಿಕ ಸಮೀಕ್ಷೆ ನಡೆಸುವಂತೆ ಪುರಾತತ್ವ ಇಲಾಖೆಗೆ ನಿರ್ದೇಶಿಸಿ ವಾರಣಾಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶವು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಸಂಘಪರಿವಾರದ ದಾಳಿಗೆ ನೆರವಾಗುವ ಸ್ಪಷ್ಟ ಪ್ರಕರಣವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ (ಎನ್.ಇ.ಸಿ) ಅಂಗೀಕರಿಸಿದ ನಿರ್ಣಯವು ಬಣ್ಣಿಸಿದೆ.
ಬಾಬರಿ ಮಸ್ಜಿದ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಿದ್ಧಪಡಿಸಿದ ಪೂರ್ವ ನಿರ್ದೇಶನವನ್ನೂ ಈ ಕೋರ್ಟ್ ಆದೇಶವು ಕಡೆಗಣಿಸಿದೆ. ಒಡೆತನದ ವಿವಾದದಲ್ಲಿ ಪುರಾತತ್ವ ಸಮೀಕ್ಷೆ ಇಲಾಖೆಯ ಪುರಾತತ್ವ ಸಂಶೋಧನೆಗಳು ಕಾನೂನಿನ ಆಧಾರವಾಗಲಾರದು ಎಂದು ಐವರು ನ್ಯಾಯಧೀಶರ ಪೀಠವು ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991ಗೂ ವ್ಯತಿರಿಕ್ತವಾಗಿದೆ. 15 ಆಗಸ್ಟ್ 1992ರ ತನಕ ಭಾರತದಲ್ಲಿರುವ ಆರಾಧನಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡಬೇಕೆಂದು ಈ ಕಾಯ್ದೆ ಹೇಳುತ್ತದೆ. 2019ರ ಸುಪ್ರೀಂ ಕೋರ್ಟ್ ನ ಅಯೋಧ್ಯೆ ಪ್ರಕರಣದ ತೀರ್ಪಿನಲ್ಲೂ ಈ ಕಾನೂನು ಮತ್ತೊಮ್ಮೆ ಖಾತರಿಗೊಂಡಿದೆ. ಮಂದಿರ ಪ್ರತಿಪಾದಕರು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ವಿರುದ್ಧದ ಮೇಲ್ಮನವಿ ಇನ್ನೂ ಅಲಹಾಬಾದ್ ಹೈಕೋರ್ಟ್ ಮುಂದೆ ಬಾಕಿಯಿದೆ ಎಂಬುದು ಸಂಬಂಧಿತ ವಿಷಯವಾಗಿದೆ. ಈ ವಾಸ್ತವಗಳ ಹಿನ್ನೆಲೆಯಲ್ಲಿ ಕಾನೂನನ್ನು ಉಲ್ಲಂಘಿಸುವ ಮತ್ತು ಮಿತಿಯನ್ನು ದಾಟುವ ಪ್ರಸ್ತುತ ಆದೇಶವನ್ನು ರದ್ದುಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟನ್ನು ಒತ್ತಾಯಿಸಿದೆ.
ಮುಸ್ಲಿಮ್ ಧಾರ್ಮಿಕ ಸ್ಥಳಗಳು ಮತ್ತು ಆಚಾರಗಳ ವಿರುದ್ಧ ಸಂಘಪರಿವಾರದ ಹಿಂಸಾತ್ಮಕ ವಿಭಜನಕಾರಿ ಅಜೆಂಡಾವನ್ನು ಹೊಂದಿದ ಮೊಕದ್ದಮೆಗಳಲ್ಲಿ ನ್ಯಾಯಾಂಗವು ಆಸಕ್ತಿತೋರುವ ಇತ್ತೀಚಿನ ಪದ್ಧತಿಯೊಂದಿಗೆ ಈ ಆದೇಶವನ್ನು ವೀಕ್ಷಿಸಬೇಕಾಗುತ್ತದೆ. ಗ್ಯಾನ್ ವ್ಯಾಪಿ ಮಸ್ಜಿದ್ ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಬಾಬರಿ ಮಸ್ಜಿದ್ ನಂತೆಯೇ ಕಾಲಾಕ್ರಮಣಿಕೆ ಯೊಂದಿಗೆ ಅನುಕರಿಸಲ್ಪಟ್ಟಿದೆ. ಬಾಬರಿ ಮಸ್ಜಿದ್ ಪ್ರಕರಣದಲ್ಲಿ ಹಿಂದುತ್ವ ಬಣವು ಮೊದಲು ವಿವಾದಿತ ಸ್ಥಳದಲ್ಲಿ ಎ.ಎಸ್.ಐ ಸರ್ವೇ ನಡೆಸು ವಂತೆ ಕೋರಿ ನ್ಯಾಯಾಲಯದ ಆದೇಶವನ್ನು ಪಡೆಯಲು ಯಶಸ್ವಿಯಾಗಿತ್ತು.
ಈ ಹಂತದಲ್ಲಿ ಎ.ಎಸ್.ಐ ತಂಡದಲ್ಲಿ ಇಬ್ಬರು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಒಳಗೊಳ್ಳುವಿಕೆಯನ್ನು ನ್ಯಾಯಾಯಲಯವು ನಿರ್ದಿಷ್ಟಪಡಿಸಿದೆ. ಇದು ಆರೆಸ್ಸೆಸ್ ನ ವಿಭಜನಕಾರಿ ಅಜೆಂಡಾವನ್ನು ಪ್ರಚುರಪಡಿಸುವ ಹೀನ ನಡೆಗೆ ವಿಶ್ವಾಸಾರ್ಹತೆಯನ್ನು ಪಡೆಯುವ ಪ್ರಯತ್ನವೊಂದರ ಭಾಗವಾಗಿದೆ ಎಂಬಂತೆ ನೋಡಬೇಕಾಗಿದೆ. ಧ್ವಂಸಗೊಂಡ ಬಾಬರಿ ಮಸ್ಜಿದ್ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ಸುಪ್ರೀಂ ಕೋರ್ಟ್ ಅನುಮತಿಸಿತ್ತು. ಈ ಆದೇಶವು ಕಾಶಿ ಮತ್ತು ಮಥುರಾದಂತಹ ಇತರ ಮುಸ್ಲಿಮ್ ಆರಾಧನಾ ಸ್ಥಳಗಳನ್ನು ವಶಪಡಿಸುವ ನಿಟ್ಟಿನಲ್ಲಿ ತಮ್ಮ ಅಭಿಯಾನಗಳನ್ನು ಆಕ್ರಮಣಕಾರಿಯಾಗಿ ಮುಂದುವರಿಸಲು ಹಿಂದುತ್ವ ಪಡೆಗಳಿಗೆ ಹಲವು ವಿಧಗಳಲ್ಲಿ ಉತ್ತೇಜನಕಾರಿ ಯಾಗಿದೆ ಎಂಬುದು ವಾಸ್ತವವಾಗಿದೆ. ಮಸ್ಜಿದ್ ಗಳ ತಳಭಾಗದಲ್ಲಿ ಪುರಾತನ ಮಂದಿರ ವಿನ್ಯಾಸಗಳಿದ್ದವು ಎಂಬ ವಿಚಿತ್ರ ಪ್ರತಿಪಾದನೆಗಳೊಂದಿಗೆ ಧ್ವಂಸಗೊಳಿಸಬೇಕಾದ ಸಂಘಪರಿವಾರ ರಚಿಸಿದ ಮಸ್ಜಿದ್ಗಳ ಪಟ್ಟಿಯ ಕುರಿತು ನ್ಯಾಯಂಗದ ಪಕ್ಷಪಾತವು ಜಾತ್ಯತೀತ ಭಾರತಕ್ಕೆ ತೀವ್ರ ಬೆದರಿಕೆಯಾಗಿದೆ. ಬಾಬರಿ ಮಸ್ಜಿದ್ ಅನ್ನು ಪುನರ್ ನಿರ್ಮಿಸುವುದು ಈ ದೇಶದಲ್ಲಿ ಜಾತ್ಯತೀತತೆಯನ್ನು ಮರುಸ್ಥಾಪಿಸುವತ್ತ ಮೊದಲ ಹೆಜ್ಜೆಯಾಗಲಿದೆಯೆಂದು ಪಾಪ್ಯುಲರ್ ಫ್ರಂಟ್ ನಂಬುತ್ತದೆ. ನ್ಯಾಯವನ್ನು ಮರುಸ್ಥಾಪಿಸುವುದಕ್ಕಾಗಿ ಈ ದೀರ್ಘ ಹೋರಾಟದ ಮುಂಚೂಣಿಯಲ್ಲಿದ್ದು ಮುಂದೆ ಯಾವುದೇ 'ಬಾಬರಿ ಧ್ವಂಸ'ಗಳು ನಡೆಯುವುದನ್ನು ತಡೆಯುವ ನಮ್ಮ ಬದ್ಧತೆಯ ಕುರಿತು ನಾವು ಭರವಸೆ ವ್ಯಕ್ತಪಡಿಸುತ್ತೇವೆ.
ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಈ ಹಿಂದುತ್ವ ನಡೆಗಳು ಮತ್ತು ದಾಳಿಗಳನ್ನು ನಿಲ್ಲಿಸಲು ಉಚ್ಛ ನ್ಯಾಯಾಲಯಗಳು ತ್ವರಿತ ಮಧ್ಯಪ್ರವೇಶ ಮಾಡಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ಈ ಹಸ್ತಕ್ಷೇಪದೊಂದಿಗೆ ಉಂಟಾಗಿರುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟಿನ ಕುರಿತು ಬಹುಸಂಖ್ಯಾತ ಸಮುದಾಯ ದಲ್ಲಿರುವ ವಿಭಿನ್ನ ವರ್ಗಗಳು, ರಾಜಕೀಯ ಪಕ್ಷಗಳು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ ಎನ್ನುವುದರ ಮೇಲೆ ಅವುಗಳ ನೈಜ ವಿಶ್ವಾಸಾರ್ಹ ತೆಯ ಪರೀಕ್ಷೆಯಾಗಲಿದೆ. ಮುಸ್ಲಿಮ್ ಸಮುದಾಯ ಮತ್ತು ಅದರ ನಾಯಕರು ಇದರ ಬಗ್ಗೆ ಪ್ರಶ್ನಿಸಬೇಕು ಮತ್ತು ಸಂಘಪರಿವಾರದ ಈ ದುಷ್ಟ ಯೋಜನೆಗಳ ವಿರುದ್ಧ ದೃಢವಾಗಿ ನಿಲ್ಲಬೇಕೆಂದು ನಾವು ಒತ್ತಾಯಿಸುತ್ತೇವೆ.
ಇನ್ನೊಂದು ನಿರ್ಣಯದಲ್ಲಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕುರಿತಾದ ಪುಸ್ತಕದ ಉರ್ದು ಆವೃತ್ತಿ ಬಿಡುಗಡೆಗೊಳಿಸುವ ಉರ್ದು ಭಾಷೆ ಪ್ರಚುರಪಡಿಸುವ ರಾಷ್ಟ್ರೀಯ ಕೌನ್ಸಿಲ್ (ಎನ್.ಸಿ.ಪಿ.ಯು.ಎಲ್) ನ ನಡೆಯನ್ನು ಎನ್.ಇ.ಸಿ ತೀವ್ರವಾಗಿ ಖಂಡಿಸಿದೆ. ಫ್ಯಾಶಿಸ್ಟ್ ಸಂಘಟನೆಯ ನಾಯಕನ ಉಪನ್ಯಾಸಗಳು ಮತ್ತು ಭಾಷಣಗಳನ್ನು ಪ್ರಚುರಪಡಿಸಲು ಸರಕಾರಿ ಸಂಸ್ಥೆ ಬಳಕೆಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮುಸ್ಲಿಮ್ ಸಮುದಾಯವನ್ನು ಸಮೀಪಿಸಲು ಪುಸ್ತಕವನ್ನು ಉರ್ದುವಿನಲ್ಲಿ ಪ್ರಕಟಿಸಲಾಗುತ್ತಿದೆ ಮತ್ತು ಪ್ರತಿಯೋರ್ವ ಭಾರತೀಯನೂ ತನ್ನನ್ನು ಹಿಂದೂವೆಂದು ಗುರುತಿಸಬೇಕು ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೋರ್ವನೂ "ಆರೆಸ್ಸೆಸ್ ಶಾಖೆ" ಗಳಲ್ಲಿ ತನ್ನನ್ನು ಸಂಯೋಜಿಸಬೇಕು ಎಂಬಂತಹ ವಿಷಕಾರಿ ಕಲ್ಪನೆಗಳನ್ನು ಅದು ಹೊಂದಿದೆ.
ಹಿಂದುತ್ವ ಸಿದ್ಧಾಂತವನ್ನು ಪ್ರಚುರಪಡಿಸಲು ನೆರವಾಗುವ ಈ ರೀತಿಯ ಜನಾಂಗೀಯ ನಡೆಗಳಿಂದ ಸರಕಾರಿ ಸಂಸ್ಥೆಗಳು ಹಿಂದೆ ಸರಿಯಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕಟನೆಯಲ್ಲಿ ತಿಳಿಸಿದೆ.







