ಡಾ.ಸಿಎ ಎ. ರಾಘವೇಂದ್ರರಾವ್‌ಗೆ ಸನ್ಮಾನ

ಮಂಗಳೂರು, ಎ.12: ಡಾಕ್ಟರೇಟ್ ಪದವಿ ಪಡೆದ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಿಎ ಎ. ರಾಘವೇಂದ್ರರಾವ್ ಅವರನ್ನು ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜು, ಹೋಟೆಲ್ ಶ್ರೀನಿವಾಸ್, ಉಡುಪಿ ಕೃಷ್ಣ ಭವನ ಹಾಗೂ ರಾಘವೇಂದ್ರ ರಾವ್ ಮತ್ತು ಅಸೋಸಿಯೇಟ್ಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಉಪಕುಲಪತಿ ಡಾ. ಪಿ.ಎಸ್. ಐತಾಳ್ ಕುಲಪತಿ ಡಾ.ಸಿಎ ಎ. ರಾಘವೇಂದ್ರರಾವ್ ಅವರ ಸಾಧನೆಯನ್ನು ಶ್ಲಾಘಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ಎ. ರಾಘವೇಂದ್ರ ರಾವ್ ತಾನು ನಿಸ್ವಾರ್ಥವಾಗಿ ಕೆಲಸ ಮಾಡಿದ ನೌಕರರ ಪರಿಶ್ರಮದ ಫಲ ಮತ್ತು ಈ ಗೌರವವು ತಂಡದ ಕಾರ್ಯವನ್ನು ಗುರುತಿಸುತ್ತದೆ. ಮುಂದಿನ ದಿನಗಳಲ್ಲಿ ಮಂಗಳೂರಿನಾಚೆಗೆ ವಿವಿಯನ್ನು ವಿಸ್ತರಿಸಲು ಬಯಸುತ್ತೇನೆ ಎಂದು ತಿಳಿಸಿದರು.
ಡಾ.ಅಜಯ್ ಕೆ.ಜಿ. ವಂದಿಸಿದರು.
Next Story





