ಮಸೀದಿಗೆ ಕಲ್ಲೆಸೆದ ಪ್ರಕರಣ: ಇಬ್ಬರು ಬಾಲಕರ ಸೆರೆ
ಮಂಗಳೂರು : ಸುರತ್ಕಲ್ ಸಮೀಪದ ಜನತಾ ಕಾಲನಿಯ ಸಾದುಲಿ ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸಕ್ಕೆ ಎ.3ರಂದು ರಾತ್ರಿ ಕಲ್ಲೆಸೆದ ಇಬ್ಬರು ದುಷ್ಕರ್ಮಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಅಪ್ತಾಪ್ತರಾದ ಕಾರಣ ಪೊಲೀಸರು ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಅವರು ಸ್ಥಳೀಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎ.3ರ ರಾತ್ರಿ ಸುಮಾರು 2:30ರ ವೇಳೆಗೆ ದ್ವಿಚಕ್ರ ವಾಹನವೊಂದರಲ್ಲಿ ಬಂದ ದುಷ್ಕರ್ಮಿಗಳು ಮಸೀದಿಗೆ ಕಲ್ಲೆಸೆದಿದ್ದರು. ಇದರಿಂದ ಮಸೀದಿಯ ಕಿಟಕಿಯ ಗಾಜಿಗೆ ಹಾನಿಯಾಗಿತ್ತು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
Next Story





