ದಾರುಲ್ ಇಲ್ಮ್ ನಲ್ಲಿ ಎ.14ರಿಂದ ರಮಝಾನ್ ಪ್ರವಚನ ಕಾರ್ಯಕ್ರಮ
ಮಂಗಳೂರು: ಅಲ್ ವಹ್ದಃ ಆಡಿಟೋರಿಯಂ, ದಾರುಲ್ ಇಲ್ಮ್ ಮದ್ರಸ, ಲುಲು ಸೆಂಟರ್, ಇಂದಿರಾ ಆಸ್ಪತ್ರೆ ಬಳಿ, ಫಳ್ನೀರ್, ಮಂಗಳೂರು ಇಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ರಮಝಾನ್ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಎಪ್ರಿಲ್ 14ರ ಬುಧವಾರ "ಕುರ್ ಆನ್ ನಮ್ಮನ್ನು ಬದಲಿಸಲಿ" ಮತ್ತು 15 ರ ಗುರುವಾರ "ಸ್ವರ್ಗಕ್ಕೆ ಹೋಗುವವರು" ಎಂಬ ವಿಷಯದಲ್ಲಿ ರಫೀಉದ್ದೀನ್ ಕುದ್ರೋಳಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ಅಪರಾಹ್ನ 1:15 ಕ್ಕೆ ಜರುಗಲಿದೆ.
ಮಹಿಳೆಯರಿಗೆ ಝುಹರ್ ನಮಾಝ್ ನ ವ್ಯವಸ್ಥೆ ಅಲ್ಲೇ ಮಾಡಲಾಗಿದೆ. ಪುರುಷರು ಹತ್ತಿರದ ಮಸೀದಿಯಲ್ಲಿ ನಮಾಝ್ ನಿರ್ವಹಿಸಿ ಬರಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





