ಐಪಿಎಲ್-2021: ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾಟವು ರೋಚಕ ಅಂತ್ಯ ಕಂಡಿದ್ದು, ಮುಂಬೈ ಇಂಡಿಯನ್ಸ್ ತಂಡವು ಜಯಗಳಿಸಿದೆ.
18ನೇ ಓವರ್ ನಲ್ಲಿ ಉತ್ತಮ ಎಸೆತಗಾರಿಕೆಯನ್ನು ತೋರಿದ ಜಸ್ಪ್ರೀತ್ ಬುಮ್ರಾ ಹಾಗೂ ಕೊನೆಯ ಓವರ್ ನಲ್ಲಿ ಎರಡು ಪ್ರಮುಖ ವಿಕೆಟ್ ಗಳನ್ನು ಕಬಳಿಸಿದ ಟ್ರೆಂಟ್ ಬೌಲ್ಟ್ ನೆರವಿನಿಂದ ಮುಂಬೈ ಇಂಡಿಯನ್ಸ್ ರೋಚಕ ಜಯ ಸಾಧಿಸಿತು.
ಮುಂಬೈ ಇಂಡಿಯನ್ಸ್ 153 ರನ್ ಗಳ ಗುರಿ ನೀಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ ಗಳಲ್ಲಿ 142 ರನ್ ಗಳನ್ನು ಪೇರಿಸಿ ಪಂದ್ಯ ಕೈ ಚೆಲ್ಲಿತು. ಮುಂಬೈ ಪರ ರೋಹಿತ್ ಶರ್ಮ 43 ಹಾಗೂ ಸೂರ್ಯಕುಮಾರ್ ಯಾದವ್ 56 ರನ್ ಗಳಿಸಿದರೆ, ಕೋಲ್ಕತ್ತ ಪರ ನಿತೀಶ್ ರಾಣಾ 57 ರನ್ ಗಳಿಸಿದರು. ಆಂಡ್ರೆ ರಸೆಲ್ 5 ವಿಕೆಟ್ ಗಳನ್ನು ಪಡೆದು ಮಿಂಚಿದರು.
Next Story