ರಾಜಸ್ಥಾನ: ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಘೋಷಣೆ

photo: ANI
ಜೈಪುರ: ದೇಶದಾದ್ಯಂತ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ಎಲ್ಲಾ ರಾಜ್ಯಗಳೂ ಈ ಕುರಿತಾದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ರಾಜಸ್ಥಾನದಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕರ್ಫ್ಯೂ ತಿಂಗಳ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ. ಪ್ರತಿದಿನ ಸಂಜೆ 5 ಗಂಟೆಯೊಳಗೆ ಮಾರುಕಟ್ಟೆಗಳನ್ನು ಮುಚ್ಚುವುದು ಮತ್ತು ಎಲ್ಲಾ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳ ಸಂಪೂರ್ಣ ಮುಚ್ಚುಗಡೆಯು ಆದೇಶದಲ್ಲಿ ಒಳಗೊಂಡಿದೆ.
ಸದ್ಯ ಪೊಲೀಸರನ್ನು ನಗರಗಳಲ್ಲಿ ನಿಯೋಜಿಸಲಾಗಿದ್ದು, "ಮುಖ್ಯಮಂತ್ರಿಯವರ ಆದೇಶಗಳನ್ನು ಜಾರಿಗೊಳಿಸಲು, ಜನರು ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸುವುದನ್ನು ತಡೆಯಲು ನಾಗ್ಪುರ ಪೊಲೀಸ್ ಪಡೆ ರಸ್ತೆಗಿಳಿದಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ನಾವು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ". ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
Next Story