ಐಪಿಎಲ್-2021: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಜಯಗಳಿಸಿದ ಆರ್ ಸಿ ಬಿ

ಚೆನ್ನೈ, ಎ.14: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನ 6ನೇ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ 6 ರನ್‌ಗಳ ಜಯ ಗಳಿಸಿದೆ.
ಗೆಲುವಿಗೆ 150 ರನ್ ಗಳಿಸಬೇಕಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿತು. ನಾಯಕ ಡೇವಿಡ್ ವಾರ್ನರ್ 54 ರನ್ ಮತ್ತು ಮನೀಷ್ ಪಾಂಡೆ 38 ರನ್, ರಶೀದ್ ಖಾನ್ 17 ರನ್ ಗಳಿಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.
ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ತಂಡಕ್ಕೆ ದೊಡ್ಡ ಮೊತ್ತದ ಸವಾಲನ್ನು ದಾಖಲಿಸಲು ಹೈದರಾಬಾದ್ ತಂಡದ ಬೌಲರ್‌ಗಳು ಅವಕಾಶ ನೀಡಲಿಲ್ಲ.
ಗ್ಲೆನ್ ಮ್ಯಾಕ್ಸ್‌ವೆಲ್ 59 ರನ್ (41ಎ, 5ಬೌ,3ಸಿ) ಗಳಿಸಿದ್ದು ಹೊರತುಪಡಿಸಿದರೆ ತಂಡದ ಯಾರಿಂದಲೂ ದೊಡ್ಡ ಸ್ಕೋರ್ ದಾಖಲಾಗಲಿಲ್ಲ.
ನಾಯಕ ವಿರಾಟ್ ಕೊಹ್ಲಿ (33), ದೇವದತ್ತ ಪಡಿಕ್ಕಲ್ (11), ಶಹಬಾಝ್ ಅಹ್ಮದ್(14) ರನ್ ಗಳಿಸಿದರು.
ಜೇಸನ್ ಹೋಲ್ಡರ್ 30ಕ್ಕೆ 3, ರಶೀದ್ ಖಾನ್ 18ಕ್ಕೆ 2, ಭುವನೇಶ್ವರ್ ಕುಮಾರ್, ಶಹಬಾಝ್ ನದೀಮ್ ಮತ್ತು ಟಿ.ನಟರಾಜನ್ ತಲಾ 1 ವಿಕೆಟ್ ಪಡೆದರು.