ಉತ್ತರಪ್ರದೇಶ: ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ; ಮೇ 15ರ ವರೆಗೆ ಶಾಲೆಗಳು ಬಂದ್
ಕೆಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಸ್ತರಣೆ

ಲಕ್ನೋ, ಎ. 15: ಉತ್ತರಪ್ರದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂನ ಅವಧಿ ವಿಸ್ತರಿಸಲಾಗಿದೆ. ಅಲ್ಲದೆ, ಶಾಲೆಗಳನ್ನು ಮೇ 15ರ ವರೆಗೆ ಮುಚ್ಚಲಾಗಿದೆ.
2000ಕ್ಕೂ ಅಧಿಕ ಕೊರೋನ ಸೋಂಕಿನ ಪ್ರಕರಣಗಳು ವರದಿಯಾದ ಜಿಲ್ಲೆಗಳಲ್ಲಿ ಉತ್ತರಪ್ರದೇಶ ಸರಕಾರ ರಾತ್ರಿ ಕರ್ಫ್ಯೂವನ್ನು ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆ ವರೆಗೆ ವಿಸ್ತರಿಸಿದೆ. ಈ ಜಿಲ್ಲೆಗಳಲ್ಲಿ ನೋಯ್ಡೆ, ಲಕ್ನೋ, ವಾರಣಾಸಿ, ಪ್ರಯಾಗ್ರಾಜ್, ಗಾಝಿಯಾಬಾದ್, ಮೀರತ್, ಕಾನ್ಪುರ ನಗರ್ ಹಾಗೂ ಗೋರಖ್ಪುರ ಕೂಡ ಸೇರಿದೆ.
ಉತ್ತರಪ್ರದೇಶದಲ್ಲಿ ಶಾಲೆಗಳು ಮೇ 15ರ ವರೆಗೆ ಮುಚ್ಚಲಿವೆ. 10 ಹಾಗೂ 12ನೇ ತರಗತಿಯ ಮಂಡಳಿ ಪರೀಕ್ಷೆಯನ್ನು ಮೇ 20ರ ವರೆಗೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಉತ್ತರಪ್ರದೇಶ ಸರಕಾರ ತಿಳಿಸಿದೆ. ಪರೀಕ್ಷೆಯ ಹೊಸ ದಿನಾಂಕವನ್ನು ಮೇ ಮೊದಲ ವಾರದಲ್ಲಿ ನಿರ್ಧರಿಸಲಾಗುವುದು ಎಂದು ವರದಿ ಹೇಳಿದೆ.
Next Story