ಮಿನಿಯಪೊಲಿಸ್: ಗುಂಡು ಹಾರಿಸಿ ಕರಿಯ ಯುವಕನ ಹತ್ಯೆ
ಪೊಲೀಸ್ ಅಧಿಕಾರಿ ವಿರುದ್ಧ ಕೊಲೆ ಆರೋಪ
ಮಿನಿಯಪೊಲಿಸ್ (ಅವೆುರಿಕ), ಎ. 15: ಅಮೆರಿಕದ ಮಿನಸೋಟ ರಾಜ್ಯದ ಮಿನಿಯಪೊಲಿಸ್ ನಗರದಲ್ಲಿ ಇತ್ತೀಚೆಗೆ 20 ವರ್ಷದ ಕರಿಯ ಯುವಕನೊಬ್ಬನನ್ನು ಗುಂಡು ಹಾರಿಸಿ ಕೊಂದ ಬಿಳಿಯ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿದ್ದು, ಬುಧವಾರ ಬಂಧಿಸಲಾಗಿದೆ.
ಪೊಲೀಸ್ ಅಧಿಕಾರಿ 26 ವರ್ಷದ ಕಿಮ್ ಪಾಟರ್ ರವಿವಾರ ರೈಟ್ ಮೇಲೆ ಗುಂಡು ಹಾರಿಸಿದ್ದರು. ಅವರ ವಿರುದ್ಧದ ಆರೋಪಗಳು ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಅವರು ಬಂದೂಕನ್ನು ಟೇಸರ್ (ತಾತ್ಕಾಲಿಕವಾಗಿ ಜನರನ್ನು ನಿಶ್ಶಕ್ತಗೊಳಿಸುವ ಸಾಧನ) ಎಂಬುದಾಗಿ ಭಾವಿಸಿ ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.
ಈ ಸಾವಿನ ಬಳಿಕ, ಮಿನಿಯಪೊಲಿಸ್ನಲ್ಲಿ ಮತ್ತೊವ್ಮೆು ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಭಾರೀ ಪ್ರತಿಭಟನೆಗಳು ನಡೆದಿವೆ.
Next Story