ತಮಿಳು ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ: ಪರಿಸ್ಥಿತಿ ಗಂಭೀರ
ಗುರುವಾರ ಕೋವಿಡ್ ಲಸಿಕೆ ಪಡೆದಿದ್ದ ನಟ
ಚೆನ್ನೈ: ತಮಿಳು ಚಿತ್ರರಂಗದ ಹಾಸ್ಯನಟ ವಿವೇಕ್ ಅವರಿಗೆ ಹೃದಯಾಘಾತವಾಗಿದ್ದು, ಶುಕ್ರವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕೃತ ಹೇಳಿಕೆ ತಿಳಿಸಿದೆ. ಹೃದಯಾಘಾತಕ್ಕೆ ಸಮರ್ಪಕವಾದ ಕಾರಣ ತಿಳಿದುಬಂದಿಲ್ಲ ಮತ್ತು ಆಸ್ಪತ್ರೆ ಇನ್ನೂ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸರ್ಕಾರಿ ಒಮಾಂಡುರಾರ್ ಆಸ್ಪತ್ರೆಯಲ್ಲಿ ಗುರುವಾರ ಕೋವಿಡ್ -19 ಲಸಿಕೆ ಹಾಕಿಸಿಕೊಂಡಿದ್ದ ನಟ ವಿವೇಕ್, "ಲಸಿಕೆ ತೆಗೆದುಕೊಳ್ಳಲು ಇತರರು ಮುಂದಾಗಬೇಕೆಂದು" ಅವರು ಒತ್ತಾಯಿಸಿದ್ದರು.
“ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ನಮಗೆ ಸುರಕ್ಷತೆಯನ್ನು ಮಾತ್ರ ಒದಗಿಸುತ್ತವೆ. ಈ ಲಸಿಕೆಗಳು ಕೋವಿಡ್ ಅನ್ನು ತಡೆಯುವುದಿಲ್ಲ ಆದರೆ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ ”ಎಂದು ನಟ ಹೇಳಿದ್ದರು.
Next Story