ವಿಕಲಚೇತನರ ಮಾಸಾಶನ ದೂರು: ವಾಟ್ಸ್‌ಆ್ಯಪ್ ಮೂಲಕ ಪರಿಹಾರ
ಮಂಗಳೂರು, ಎ.16: ದ.ಕ.ಜಿಲ್ಲೆಯಲ್ಲಿ ವಿಕಲಚೇತನರ ಮಾಸಾಶನಕ್ಕೆ ಸಂಬಂಧಿಸಿದಂತೆ, ಯಾವುದೇ ತೊಂದರೆಯಿದ್ದಲ್ಲಿ ಈ ಹಿಂದೆ ಮಂಗಳೂರು ವಿಕಲಚೇತನರ ಕಚೇರಿಗೆ ಬಂದು ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಇನ್ನೀಗ ಇಂತಹಾ ತೊಂದರೆಯನ್ನು ನಿವಾರಿಸುವ ಸಲುವಾಗಿ ಮಾಸಾಶನಕ್ಕೆ ತೊಂದರೆಯಾಗುತ್ತಿರುವ ವಿಕಲಚೇತನರು ಮೊ.ಸಂ:7022071925ಕ್ಕೆ ವಾಟ್ಸ್‌ಆ್ಯಪ್‌ಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು.
ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿ ದೂ.ಸಂ:0824-2458173 ಹಾಗೂ ddwomangalore@gmail.com ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಯಮುನಾ ಡಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





