ಗಾಯಾಳು ಬೆನ್ ಸ್ಟೋಕ್ಸ್ ಮೂರು ತಿಂಗಳು ಹೊರಕ್ಕೆ

ಲಂಡನ್, ಎ.16: ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬೆರಳು ಮುರಿತಕ್ಕೊಳಗಾದ ಕಾರಣದಿಂದಾಗಿ ಮೂರು ತಿಂಗಳ ಕಾಲ ತಂಡದಿಂದ ಹೊರಗುಳಿಯಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಶುಕ್ರವಾರ ಈ ವಿಚಾರವನ್ನು ದೃಢಪಡಿಸಿದೆ.
ಸ್ಟೋಕ್ಸ್ ಗುರುವಾರ ಗಾಯದ ಸ್ವರೂಪ ತಿಳಿಯಲು ಎಕ್ಸರೆ ಮತ್ತು ಸಿಟಿ ಸ್ಕಾನ್‌ಗೆಒಳಗಾಗಿದ್ದಾರೆ. ಅವರ ಬೆರಳಿಗೆ ಆಗಿರುವ ಗಾಯವನ್ನು ದೃಢಪಡಿಸಿದೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಸೋಮವಾರ ಲೀಡ್ಸ್‌ನಲ್ಲಿ ಶಸ್ತ್ರಚಿಕಿತ್ಸೆಗಾಗಿ ಅವರು ತವರಿಗೆ ತೆರಳಲಿದ್ದಾರೆ.
ನ್ಯೂಝಿಲ್ಯಾಂಡ್ ವಿರುದ್ಧದ ಇಂಗ್ಲೆಂಡ್‌ನ ಎರಡು ಟೆಸ್ಟ್ ಪಂದ್ಯಗಳ ಸರಣಿಯು ಜೂನ್ 2 ರಿಂದ ಪ್ರಾರಂಭವಾಗುತ್ತದೆ. ಆದರೆ ಸ್ಟೋಕ್ಸ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ.
ಜೂನ್‌ನಲ್ಲಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಅಂತರ್‌ರಾಷ್ಟ್ರೀಯ ಪಂದ್ಯಗಳಿಗೆ ಅವರು ಲಭ್ಯವಾಗುವ ಸಾಧ್ಯತೆಯಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರ ಡೀಪ್ ಆಫ್ ಕ್ಯಾಚ್ ಪಡೆಯಲು ಪ್ರಯತ್ನಿಸುವಾಗ ಸ್ಟೋಕ್ಸ್ ಗಾಯಗೊಂಡಿದ್ದರು.