ರಂಗಭೂಮಿ ಕಲಾವಿದ ಪೀಟರ್ ಬೆನೆಡಿಕ್ಟ್ ನಿಧನ
ಮಂಗಳೂರು, ಎ.18: ನಾಟಕ ಕಲಾವಿದ, ಸಮಾಜ ಸೇವಕ ಪೀಟರ್ ವಿಕ್ಟರ್ ಬೆನೆಡಿಕ್ಟ್ ಬೋಳಾರ್ (73) ಅವರು ರವಿವಾರ ಮುಂಜಾನೆ 4:50ಕ್ಕೆ ನಿಧನರಾದರು.
70 ರ ದಶಕದ ಕಾಲದಲ್ಲಿಯೇ ರಂಗಭೂಮಿಗೆ ಬಂದ ಇವರು ತುಳು, ಕೊಂಕಣಿ ನಾಟಕಗಳಲ್ಲಿ ಚತುರ ಅಭಿನಯ ಮತ್ತು ಮುಖ ವರ್ಣಿಕೆಯ ಕಲಾವಿದರಾಗಿ ಗಮನಸೆಳೆದಿದ್ದರು. ದುಬೈಯಲ್ಲಿ ವೃತ್ತಿಯಲ್ಲಿದ್ದಾಗ ಅಲ್ಲಿಯ ನಾಟಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕೆ.ಎನ್.ಟೇಲರರ ನಾಟಕಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆಗಿನ ಕಾಲದ ಕೊಂಕಣಿ ನಾಟಕಗಳಲ್ಲಿ ಪೀಟರ್ ಅಭಿನಯಿಸಿ ಖ್ಯಾತರಾಗಿದ್ದರು.
ಮೃತರು ಪತ್ನಿ ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧುಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.
Next Story