‘ರಮಝಾನ್ ತಿಂಗಳು ಹೃದಯ, ಮನ, ಪರಿವರ್ತನೆಗೆ ಸಕಾಲ: ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ

ಕಾಪು, ಎ.18: ಪವಿತ್ರ ಕುರ್ಆನ್ ಅವತ್ತೀರ್ಣಗೊಂಡ ಪವಿತ್ರ ಮಾಸ ರಂಝಾನ್ ಆಗಿದ್ದು, ಈ ಗ್ರಂಥದಲ್ಲಿರುವ ಬೋಧನೆಯನ್ನು ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ತನ್ನ ಜೀವನವನ್ನು ಅರಿಷಡ್ ವೈರಿಗಳಿಂದ ಪರಿವರ್ತಿಸಿಕೊಳ್ಳಲು ಸಾಧ್ಯ ಎಂದು ಮಲ್ಪೆಮಸ್ಜಿದ್ ನ ಧರ್ಮ ಗುರು ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಕಾಪು ವರ್ತುಲ ವತಿಯಿಂದ ಇತ್ತೀಚೆಗೆ ಕೊಂಬಗುಡ್ಡೆ ತೌಹೀದ್ ಮಂಝಿಲ್ನಲ್ಲಿ ಹಮ್ಮಿಕೊಳ್ಳಲಾದ ರಮಝಾನ್ ಸ್ವಾಗತ ಕಾರ್ಯ ಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಮನುಷ್ಯ ಹೃದಯಶುದ್ಧಿಯೊಂದಿಗೆ ದೇವನ ಭಯದೊಂದಿಗೆ ಆರಾಧನೆ ಮಾಡಿ ತನ್ನ ಜೀವನ ಸಾಗಿಸಿದಾಗ ಮಾತ್ರ ಆತನ ಪ್ರಾರ್ಥನೆಗಳು ಸ್ವೀಕೃತ ಗೊಳ್ಳುತ್ತವೆ. ದೇವಭಕ್ತಿಯನ್ನು ನವೀಕರಿಸಿಕೊಳ್ಳಲು ರಮಝಾನ್ ಮಾಸ ಸಕಾಲ ಆಗಿದ್ದು, ಅದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
Next Story





