ಕೋವಿಡ್ ವಿರುದ್ಧ ಹೋರಾಡಲು ‘ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲು ಸಜ್ಜು: ಪಿಯೂಷ್ ಗೋಯಲ್

ಹೊಸದಿಲ್ಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಚುರುಕುಗೊಳಿಸಿದ ರೈಲ್ವೆ "ಆಕ್ಸಿಜನ್ ಎಕ್ಸ್‌ಪ್ರೆಸ್" ರೈಲುಗಳನ್ನು ಓಡಿಸಲು ಸಜ್ಜಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ರವಿವಾರ ಹೇಳಿದ್ದಾರೆ.
ಇದು ರೋಗಿಗಳಿಗೆ ಆಮ್ಲಜನಕವನ್ನು ಬೃಹತ್ ಪ್ರಮಾಣದಲ್ಲಿ ಹಾಗೂ ವೇಗವಾಗಿ ಪಡೆಯಲು ಸಹಾಯ ಮಾಡುತ್ತದೆ ಎಂದು ಗೋಯಲ್ ಹೇಳಿದರು.
ಈ ರೈಲುಗಳ ವೇಗದ ಚಲನೆಯನ್ನು ಖಚಿತಪಡಿಸಿಕೊಳ್ಳಲು ಹಸಿರು ಕಾರಿಡಾರ್‌ಗಳನ್ನು ರಚಿಸಲಾಗುತ್ತಿದೆ.
"ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರೈಲ್ವೆ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಆಮ್ಲಜನಕವನ್ನು ಬೃಹತ್ ಪ್ರಮಾಣದಲ್ಲಿ ಹಾಗೂ ವೇಗವಾಗಿ ರೋಗಿಗೆ ತಲುಪಿಸಲು ನಾವು ಹಸಿರು ಕಾರಿಡಾರ್ ಬಳಸಿ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸುತ್ತೇವೆ" ಎಂದು ರೈಲ್ವೆ ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈ ರೈಲುಗಳಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಹಾಗೂ ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸಲಾಗುವುದು.
ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಟ್ಯಾಂಕರ್‌ಗಳನ್ನು ರೈಲ್ವೆ ಮೂಲಕ ಸ್ಥಳಾಂತರಿಸಬಹುದೇ? ಎಂದು ವಿಚಾರಿಸಲು ರೈಲ್ವೆ ಸಚಿವಾಲಯವನ್ನು ಸಂಪರ್ಕಿಸಿದ್ದವು ಎಂದು ಸರಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
Govt under PM @NarendraModi leading the fight against COVID-19: 50 COVID-19 isolation coaches with 800 beds ready at Shakur Basti Station & 25 coaches will be available at Anand Vihar Station in Delhi. Railways can setup >3 lakh isolation beds across the country on States' demand pic.twitter.com/b9ehFnEgfI
— Piyush Goyal (@PiyushGoyal) April 18, 2021