ಉಡುಪಿ: ಮಾಸ್ಕ್ ಧರಿಸದವರಿಂದ 80,700ರೂ. ದಂಡ ವಸೂಲಿ!
ಸಾಂದರ್ಭಿಕ ಚಿತ್ರ
ಉಡುಪಿ, ಎ.19: ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊವೀಡ್-19 ಎರಡನೆ ಅಲೆಯನ್ನು ತಡೆಯಲು ಜಿಲ್ಲಾಡಳಿತ ಕೋವಿಡ್-19 ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತಿದ್ದು, ರವಿವಾರ ಒಂದೇ ದಿನದಲ್ಲಿ ಮಾಸ್ಕ್ ಧರಿಸದ 807 ಮಂದಿಯಿಂದ ಒಟ್ಟು 80,700ರೂ. ದಂಡ ವಸೂಲಿ ಮಾಡಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 400ರೂ., ಗ್ರಾಪಂ ವ್ಯಾಪ್ತಿಯಲ್ಲಿ 200ರೂ., ಅಬಕಾರಿ ಇಲಾಖೆಯಿಂದ 1200ರೂ., ಪೊಲೀಸ್ ಇಲಾಖೆಯಿಂದ 78,000ರೂ., ಪ್ರವಾಸೋದ್ಯಮ ಇಲಾಖೆಯಿಂದ 400ರೂ. ಹಾಗೂ ಎಪಿಎಂಸಿಯಿಂದ 500ರೂ. ದಂಡವನ್ನು ವಸೂಲಿ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್ ಧರಿಸದ 28,902 ಮಂದಿಯಿಂದ 30,56,600ರೂ. ದಂಡ ಸಂಗ್ರಹಿಸಲಾಗಿದೆ ಎಂದು ಉಡುಪಿ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
Next Story