ರಾಜಸ್ಥಾನಕ್ಕೆ 189 ರನ್ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ: ಬ್ಯಾಟ್ಸ್ ಮನ್ ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಐಪಿಎಲ್ ನ 12ನೇ ಪಂದ್ಯದ ಗೆಲುವಿಗೆ 189 ರನ್ ಗುರಿ ನಿಗದಿಪಡಿಸಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ರಾಜಸ್ಥಾನ ತಂಡ ಚೆನ್ನೈಯನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ಚೆನ್ನೈ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.
ಚೆನ್ನೈ ಪರವಾಗಿ ಆರಂಭಿಕ ಬ್ಯಾಟ್ಸ್ ಮನ್ ಎಫ್ ಡು ಪ್ಲೆಸಿಸ್ ಸರ್ವಾಧಿಕ ಸ್ಕೋರ್(33, 17 ಎಸೆತ, 4 ಬೌಂ.2 ಸಿ.)ಗಳಿಸಿದರು. ಅಂಬಟಿ ರಾಯುಡು(27), ಮೊಯಿನ್ ಅಲಿ(26), ಡ್ವೆಯ್ನ್ ಬ್ರಾವೊ ಔಟಾಗದೆ 20, ನಾಯಕ ಧೋನಿ 18 ಹಾಗೂ ಸ್ಯಾಮ್ ಕರನ್ 13 ರನ್ ಗಳಿಸಿದರು.
ರಾಜಸ್ಥಾನದ ಪರವಾಗಿ ಚೇತನ್ ಸಕಾರಿಯ(3-36)ಹಾಗೂ ಕ್ರಿಸ್ ಮೊರಿಸ್(2-33)ಐದು ವಿಕೆಟ್ ಗಳನ್ನು ಹಂಚಿಕೊಂಡರು.
Next Story