ಜಾರ್ಖಂಡ್ ನಲ್ಲಿ ಎಪ್ರಿಲ್ 22ರಿಂದ 29ರ ತನಕ ಲಾಕ್ ಡೌನ್

ರಾಂಚಿ: ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಗೆ ಕಡಿವಾಣ ಹಾಕಲು ಜಾರ್ಖಂಡ್ ಸರಕಾರ ಮಂಗಳವಾರ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿದೆ. ಲಾಕ್‌ಡೌನ್ ಎಪ್ರಿಲ್ 22 ರಂದು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಲಿದ್ದುಎಪ್ರಿಲ್ 29 ರಂದು ಸಂಜೆ 6 ಗಂಟೆಯವರೆಗೆ ಮುಂದುವರಿಯುತ್ತದೆ.
ಲಾಕ್‌ಡೌನ್‌ಗೆ ಸರಕಾರ ಕೆಲವು ವಿನಾಯಿತಿಗಳನ್ನು ನೀಡಿದೆ ಹಾಗೂ ಅಗತ್ಯ ಸೇವೆಗಳನ್ನು ನಿರ್ವಹಿಸಲು ಅನುಮತಿಸಲಾಗುವುದು ಎಂದು ಭರವಸೆ ನೀಡಿದೆ.
ಸರಕಾರದ ಆದೇಶದ ಪ್ರಕಾರ, ಎಲ್ಲಾ ಧಾರ್ಮಿಕ ಸ್ಥಳಗಳು ಮುಕ್ತವಾಗಿರುತ್ತವೆ, ಆದಾಗ್ಯೂ, ಭಕ್ತರು ಒಂದೆಡೆ ಜಮಾಯಿಸಲು ಅನುಮತಿ ಇಲ್ಲ. ಲಾಕ್ ಡೌನ್ ಸಮಯದಲ್ಲಿ ಗಣಿಗಾರಿಕೆ, ಕೃಷಿ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು.
ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಎಲ್ಲರೂ ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು ಹಾಗೂ ಅದನ್ನು 'ಸ್ವಾಸ್ಥ್ಯ ಸುರಕ್ಷಾ ಸಪ್ತಾಹ' (ಆರೋಗ್ಯ ಸಂರಕ್ಷಣಾ ವಾರ) ಎಂದು ಆಚರಿಸಬೇಕೆಂದು ಮನವಿ ಮಾಡಿದ್ದಾರೆ.
Next Story