ಕುಂಭಮೇಳದಲ್ಲಿ ಭಾಗವಹಿಸಿದ ನೇಪಾಳದ ಮಾಜಿ ರಾಜ, ರಾಣಿಗೆ ಕೊರೋನ
ಕಠ್ಮಂಡು (ನೇಪಾಳ), ಎ. 20: ಭಾರತದ ಹರಿದ್ವಾರದಲ್ಲಿ ಮಹಾಕುಂಭಮೇಳದಲ್ಲಿ ಭಾಗವಹಿಸಿ ಮರಳಿದ ನೇಪಾಳದ ಮಾಜಿ ದೊರೆ ಜ್ಞಾನೇಂದ್ರ ಶಾ ಮತ್ತು ಮಾಜಿ ರಾಣಿ ಕೋಮಲ್ ಶಾ ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ.
73 ವರ್ಷದ ಮಾಜಿ ದೊರೆ ಮತ್ತು 70 ವರ್ಷದ ಮಾಜಿ ರಾಣಿ ಇತ್ತೀಚೆಗೆ ಭಾರತದಿಂದ ಮರಳಿದ್ದರು. ಹರಿದ್ವಾರದಲ್ಲಿ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದ ಅವರು, ಹರ್ ಕೀ ಪೌರಿಯಲ್ಲಿ ಪವಿತ್ರ ಸ್ನಾನ ಮಾಡಿದ್ದರು.
ಅವರ ಮಾದರಿಗಳನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಅವರು ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ ಎಂದು ‘ಹಿಮಾಲಯನ್ ಟೈಮ್ಸ್’ ವರದಿ ಮಾಡಿದೆ.
Next Story