ಧೋನಿಯ ತಂದೆ, ತಾಯಿಗೆ ಕೊರೋನ ಪಾಸಿಟಿವ್
ರಾಂಚಿಯ ಆಸ್ಪತ್ರೆಗೆ ದಾಖಲು

ರಾಂಚಿ: ಭಾರತದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿಯವರ ತಂದೆ ಪಾನ್ ಸಿಂಗ್ ಹಾಗೂ ಅವರ ತಾಯಿ ದೇವಕಿ ದೇವಿ ಅವರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದ್ದು, ಧೋನಿಯ ಹೆತ್ತವರು ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಧೋನಿಯ ತಂದೆ ಹಾಗೂ ತಾಯಿ ರಾಂಚಿಯ ಪ್ಲಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಧೋನಿ ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದು, ಪ್ರಸ್ತುತ ಐಪಿಎಲ್ ನಲ್ಲಿ ಆಡುತ್ತಿದ್ದಾರೆ.
Next Story