ಫೇಸ್ ಬುಕ್ ನಲ್ಲಿ ಕೊನೆಯ ಗುಡ್ ಮಾರ್ನಿಂಗ್ ಹೇಳಿದ ಮರುದಿನವೇ ಕೋವಿಡ್-19ಗೆ ಬಲಿಯಾದ ಮುಂಬೈ ಡಾಕ್ಟರ್
ಡಾ.ಮನೀಷಾ (facebook)
ಮುಂಬೈ: “ಬಹುಶಃ ಇದು ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ಈ ವೇದಿಕೆಯಲ್ಲಿ ನಾನು ನಿಮ್ಮನ್ನು ಭೇಟಿಯಾಗದೇ ಇರಬಹುದು’’ಇದು ಸಿವ್ಡಿ ಟಿಬಿ ಆಸ್ಪತ್ರೆಯ 51 ವರ್ಷದ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಮನೀಷಾ ಜಾಧವ್ ಅವರು ಸೋಮವಾರ ಕೋವಿಡ್ ಗೆ ಬಲಿಯಾಗುವ ಮೊದಲಿನ ಫೇಸ್ ಬುಕ್ ಪೋಸ್ಟ್ ಆಗಿತ್ತು.
ಡಾ.ಮನೀಷಾ ಅವರು ಸೊಮವಾರ ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಲ್ಲಿ “ಬಹುಶಃ ಇದು ನನ್ನ ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ಈ ಪ್ಲಾಟ್ ಫಾರ್ಮ್ನಲ್ಲಿ ನಾನು ನಿಮ್ಮನ್ನು ಇಲ್ಲಿ ಮತ್ತೆ ಭೇಟಿಯಾಗದಿರಬಹುದು. ಎಲ್ಲರೂ ಆರೋಗ್ಯವನ್ನು ನೋಡಿಕೊಳ್ಳಿ. ದೇಹ ಸಾಯುತ್ತದೆ. ಆತ್ಮ ಸಾಯುವುದಿಲ್ಲ.ಆತ್ಮವು ಅಮರವಾಗಿದೆ ಎಂದು ಬರೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಡಾ.ಮನೀಷಾ ಜಾಧವ್ ಅವರು ಕ್ಲಿನಿಕಲ್ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ನಾಗರಿಕ ಆರೋಗ್ಯ ವಿಭಾಗದ ಮೊದಲ ವೈದ್ಯೆಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಹಾರಾಷ್ಟ್ರದಲ್ಲಿ 18,000ದಷ್ಟು ವೈದ್ಯರು ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ 168 ಮಂದಿ ಸಾವನ್ನಪ್ಪಿದ್ದರು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ತಿಳಿಸಿದೆ.
May be last Good Morning. I may not meet you here on this plateform. Take care all. Body die. Soul doesnt. Soul is immortal
Posted by Manisha Jadhav on Saturday, 17 April 2021