ಕಾಂಗ್ರೆಸ್ ನಾಯಕ, ದಿಲ್ಲಿಯ ಮಾಜಿ ಸಚಿವ ವಾಲಿಯಾ ಕೋವಿಡ್-19ನಿಂದ ನಿಧನ

ಹೊಸದಿಲ್ಲಿ: ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ದಿಲ್ಲಿ ಸರಕಾರದ ಮಾಜಿ ಸಚಿವ ಎ.ಕೆ.ವಾಲಿಯಾ ಕೋವಿಡ್-19ನಿಂದಾಗಿ ಗುರುವಾರ ಬೆಳಗ್ಗಿನ ಜಾವ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಅವರು ವಾಲಿಯಾ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ವಾಲಿಯಾ ಅವರು ಲಕ್ಷ್ಮೀ ನಗರ ವಿಧಾನಸಭಾಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿದ್ದರು. ಕೋವಿಡ್-19 ಸೋಂಕಿಗೆ ಒಳಗಾದ ಬಳಿಕ ಕೆಲವು ದಿನಗಳ ಹಿಂದೆ ವಾಲಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಇಂದು ಬೆಳಗ್ಗಿನ ಜಾವ 1:30ಕ್ಕೆ ನಿಧನರಾದರು ಎಂದು ಪಕ್ಷದ ನಾಯಕರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ವಾಲಿಯಾ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ವಾಲಿಯಾ ಅವರು ದಿಲ್ಲಿಯಲ್ಲಿ ಸಕಾರಾತ್ಮಕ ರಾಜಕೀಯವನ್ನು ಉತ್ತೇಜಿಸುತ್ತಿದ್ದರು ಎಂದು ಸಿಸೋಡಿಯಾ ಹೇಳಿದ್ದಾರೆ.
Next Story