ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಕೈಹಿಡಿದ ನಟ ವಿಷ್ಣು ವಿಶಾಲ್

ಹೊಸದಿಲ್ಲಿ: ತಮಿಳು ನಟ-ನಿರ್ಮಾಪಕ ವಿಷ್ಣು ವಿಶಾಲ್ ಅವರು ದೀರ್ಘಕಾಲದ ಗೆಳತಿ, ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನು ಇಂದು ಹೈದರಾಬಾದ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾದರು. ಮದುವೆಯಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದರು.
ವಿವಾಹ ಪೂರ್ವ ಪೂರ್ವ ಕಾರ್ಯಕ್ರಮಗಳು ಬುಧವಾರ ಮೆಹೆಂದಿ ಸಮಾರಂಭದೊಂದಿಗೆ ಪ್ರಾರಂಭವಾಯಿತು.
ದೇಶಾದ್ಯಂತ ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿರುವುದರಿಂದ ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುಟ್ಟಾ ಹೈದರಾಬಾದ್ ನಲ್ಲಿ ತಮ್ಮ ಹತ್ತಿರದ ಮತ್ತು ಆತ್ಮೀಯರ ಸಮ್ಮುಖದಲ್ಲಿ ನೋಂದಾಯಿತ ವಿವಾಹ ಮಾಡಿಕೊಂಡರು
ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುಟ್ಟಾ ಅವರು ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ವಿಶಾಲ್ ಅವರು ಕಳೆದ ವರ್ಷ ಸೆಪ್ಟಂಬರ್ 19 ರಂದು ಜ್ವಾಲಾ ಅವರಲ್ಲಿ ವಿವಾಹದ ಪ್ರಸ್ತಾವ ಇಟ್ಟಿದ್ದರು. ಅವರಿಗೆ ಉಂಗುರವನ್ನು ತೊಡಿಸಿದ್ದರು.
Next Story