Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೋವಿಡ್ ವರದಿಯ ತಾಂತ್ರಿಕ ಸಮಸ್ಯೆ: ದುಬೈ...

ಕೋವಿಡ್ ವರದಿಯ ತಾಂತ್ರಿಕ ಸಮಸ್ಯೆ: ದುಬೈ ಹೋಗಬೇಕಿದ್ದ ಕೆಲ ಪ್ರಯಾಣಿಕರ ಪರದಾಟ, ನಷ್ಟ

ವಾರ್ತಾಭಾರತಿವಾರ್ತಾಭಾರತಿ22 April 2021 7:16 PM IST
share
ಕೋವಿಡ್ ವರದಿಯ ತಾಂತ್ರಿಕ ಸಮಸ್ಯೆ: ದುಬೈ ಹೋಗಬೇಕಿದ್ದ ಕೆಲ ಪ್ರಯಾಣಿಕರ ಪರದಾಟ, ನಷ್ಟ

ಮಂಗಳೂರು, ಎ.22: ವಿದೇಶಕ್ಕೆ ಪ್ರಯಾಣಿಸುವರಿಗೆ ಆಸ್ಪತ್ರೆಯಲ್ಲಿ ಮಾಡಲಾಗುವ ಕೋವಿಡ್ ಪರೀಕ್ಷಾ ವರದಿಯ ತಾಂತ್ರಿಕ (ಕ್ಯೂರ್‌ಆರ್ ಕೋಡ್) ಸಮಸ್ಯೆ ಕಾರಣದಿಂದ ನಿನ್ನೆ ದುಬೈಗೆ ಪ್ರಯಾಣಿಸಬೇಕಾಗಿದ್ದ ಕೆಲ ಪ್ರಯಾಣಿಕರು ಪರದಾಡಿದ, ನಷ್ಟ ಅನುಭವಿಸಿರುವ ಪ್ರಸಂಗ ನಡೆದಿದೆ.

ದುಬೈಗೆ ಪ್ರಯಾಣ ಬೆಳೆಸಬೇಕಾದವರು 48 ಗಂಟೆ ಮೀರದ ಕೋವಿಡ್ ಟೆಸ್ಟ್ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ. ಆ ವರದಿಯು ಪ್ರಸ್ತುತ ಕೋವಿಡ್ ಟೆಸ್ಟ್ ಮಾಡಲಾದ ಆಸ್ಪತ್ರೆಯ ಕ್ಯೂರ್‌ಆರ್ ಕೋಡ್ ಹೊಂದಿರಬೇಕಾಗುತ್ತದೆ. ಆದರೆ ಕೆಲವೊಂದು ಆಸ್ಪತ್ರೆಗಳಲ್ಲಿ ಈ ಕ್ಯೂರ್‌ಆರ್ ಕೋಡ್ ಸಮಸ್ಯೆಯಿಂದಾಗಿ ವಿದೇಶಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.

ನಗರದ ಪ್ರತಿಷ್ಠಿತ ಎಜೆ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ನಡೆಸಿ ಸ್ಪೆಸ್ ಜೆಟ್ ಮೂಲಕ ದುಬೈಗೆ ತೆರಳಬೇಕಿದ್ದ ಕೆಲ ಪ್ರಯಾಣಿಕರಿಗೆ ನಿನ್ನೆ ಈ ಕ್ಯೂರ್‌ಆರ್ ಕೋಡ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ದುಬೈಗೆ ತೆರಳಲು ಸಾಧ್ಯವಾಗಿಲ್ಲ ಎಂಬುದಾಗಿ 'ವಾರ್ತಾಭಾರತಿ'  ಜತೆಗೆ ಹಲವರು ದೂರಿಕೊಂಡಿದ್ದಾರೆ.

‘‘ನಾನು ನಿನ್ನೆ ರಾತ್ರಿ 1.40ರ ಸ್ಪೈಸ್‌ಜೆಟ್ ವಿಮಾನದ ಮೂಲಕ ದುಬೈಗೆ ತೆರಳಬೇಕಿತ್ತು. ಹಾಗಾಗಿ 10.30ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಗತ್ಯ ದಾಖಲೆಗಳನ್ನು ತಪಾಸಣೆ ನಡೆಸಲಾರಂಭಿಸಿದ್ದೆ. ಆದರೆ ನನ್ನ ಕೋವಿಡ್ ಟೆಸ್ಟ್ ವರದಿಯ ಕ್ಯೂರ್ ಆರ್ ಕೋಡ್ ಲಿಂಕ್ ಆಗದ ಕಾರಣ ಸಮಸ್ಯೆ ಎದುರಿಸಬೇಕಾಯಿತು. ಈ ಬಗ್ಗೆ ಸಂಬಂಧಪಟ್ಟ ಆಸ್ಪತ್ರೆಯವರನ್ನು ಸಂಪರ್ಕಿಸಿದಾಗ ಅವರು, ವೆಬ್‌ಸೈಟ್‌ನಲ್ಲಿ ಸಮಸ್ಯೆ ಇದೆ. ಕ್ಯೂರ್‌ಆರ್ ಕೋಡ್ ಲಿಂಕ್ ಆಗುತ್ತಿಲ್ಲ. ಎರರ್ ಬರುತ್ತಿದೆ ಎಂದು ಸ್ಪೈಸ್ ಜೆಟ್ ಅಧಿಕಾರಿಗಳಲ್ಲಿ ನನ್ನ ಪ್ರಯಾಣಕ್ಕೆ ಸಹಕರಿಸುವಂತೆ ಕೇಳಿಕೊಂಡರು. ಆದರೆ, ದುಬೈನಲ್ಲಿ ಕ್ಯೂರ್‌ಆರ್ ಕೋಡ್ ಲಿಂಕ್ ಆಗಬೇಕಾಗಿರುವುದು ಅಗತ್ಯವಾಗಿರುವ ಕಾರಣ ಅದು ಲಿಂಕ್ ಆಗದೆ ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ವಿಮಾನ ಹೊರಡುವವರೆಗೂ ನಾವು ಸಂಬಂಧಪಟ್ಟವರಲ್ಲಿ ವಿನಂತಿಸಿಕೊಂಡು ಗೋಗರೆದರೂ ಕ್ಯೂರ್‌ಆರ್ ಕೋಡ್ ಸ್ಕಾನ್ ಆಗದೆ ಹಿಂತಿರುಗಬೇಕಾಯಿತು. ಸಣ್ಣ ತಾಂತ್ರಿಕ ಅಡಚಣೆಯಿಂದ ನಾನು ಹಣದ ಜತೆಗೆ ಮಾನಸಿಕವಾಗಿಯೂ ನೆಮ್ಮದಿ ಕಳೆದುಕೊಳ್ಳುವಂತಾಗಿದೆ’’ ಎಂದು ಉಡುಪಿ ಕಾಪು ನಿವಾಸಿಯೊಬ್ಬರು ‘ವಾರ್ತಾಭಾರತಿ’ ಜತೆ ಪ್ರತಿಕ್ರಿಯಿಸಿದ್ದಾರೆ.

‘‘ಆಸ್ಪತ್ರೆಯವರು ನಮ್ಮಿಂದ ತೊಂದರೆಯಾಗಿದೆ ಎಂದು ನಿನ್ನೆ ರಾತ್ರಿ ಹೇಳಿದ್ದಾರೆ. ಆಸ್ಪತ್ರೆಯ ಮೇಲಿನ ವಿಶ್ವಾಸದಿಂದ ಅಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದೆ. ವರದಿಯನ್ನೂ ಅವರು ನೀಡಿದ್ದಾರೆ. ಅವರಲ್ಲಿ ಕ್ಯೂರ್ ಆರ್ ಕೋಡ್ ಸ್ಕಾನ್ ಆಗಿದೆಯಲ್ಲಾ ಎಂದು ವರದಿ ಪಡೆಯುವಾಗ ಕೇಳಿದ್ದೆ. ಎಲ್ಲವೂ ಸರಿಯಾಗಿದೆ ಎಂಬ ಉತ್ತರವನ್ನೂ ನೀಡಿದ್ದರು. ಆದರೆ ಅದೇನೋ ತಾಂತ್ರಿಕ ಸಮಸ್ಯೆಯಿಂದಾಗಿ ನನಗೆ ಸುಮಾರು 36,000 ರೂ. ನಷ್ಟವಾಗಿದೆ. ಪ್ರಯಾಣವೂ ಮೊಟಕುಗೊಂಡಿದೆ’’ಎಂದು ಆ ಪ್ರಯಾಣಿಕ ಅಳಲು ತೋಡಿಕೊಂಡಿದ್ದಾರೆ.

‘‘ದುಬೈಗೆ ಭಾರತದಿಂದ ತೆರಳುವ ಪ್ರಯಾಣಿಕರ ಕೋವಿಡ್ ಟೆಸ್ಟ್ ಪ್ರಮಾಣ ಪತ್ರದ ಕುರಿತಂತೆ ಆ ಸರಕಾರ ಹೊಸ ನಿಯಮಾವಳಿಯನ್ನು ಜಾರಿಗೊಳಿಸಿದ್ದು, ಅದು ನಮಗೆ ಮಾಹಿತಿ ದೊರಕಿರುವುದು ನಿನ್ನೆ ರಾತ್ರಿ ವೇಳೆಗೆ. ಕ್ಯೂರ್ ಆರ್ ಕೋಡ್‌ನ ತಾಂತ್ರಿಕ ಸಮಸ್ಯೆಯನ್ನು ಆಸ್ಪತ್ರೆಯಲ್ಲಿ ಸರಿಪಡಿಸಲಾಗುತ್ತಿದೆ’’ ಎಂದು ಎಜೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಕೆಲವೊಂದು ಆಸ್ಪತ್ರೆಗಳಲ್ಲಿನ ಕೋವಿಡ್ ಟೆಸ್ಟ್ ಪ್ರಮಾಣ ಪತ್ರದ ಕ್ಯೂರ್‌ಆರ್ ಕೋಡ್‌ನ ಸಮಸ್ಯೆಯ ಕುರಿತಂತೆ ಹಲವಾರು ವಿದೇಶ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಪ್ರಯಾಣಕ್ಕೆ ಮುಂಚಿತವಾಗಿ ತಮ್ಮಲ್ಲಾ ದಾಖಲೆಗಳನ್ನು ಸಂಬಂಧಪಟ್ಟವರಿಂದ ಸಮರ್ಪಕವಾಗಿ ಪರಿಶೀಲಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.

ದುಬೈ ಪ್ರಯಾಣಿಕರೇ ಗಮನಿಸಿ....

ವಿದೇಶಕ್ಕೆ ಅದರಲ್ಲೂ ಮುಖ್ಯವಾಗಿ ದುಬೈಗೆ ಪ್ರಯಾಣಿಸುವವರು ಹೊಂದಿರಬೇಕಾದ ಕೋವಿಡ್ ಟೆಸ್ಟ್ ಪ್ರಮಾಣಪತ್ರದ ಅವಧಿಯನ್ನು 72 ಗಂಟೆಯಿಂದ 48 ಗಂಟೆಗೆ ಇಳಿಸಲಾಗಿದೆ. ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರದವರು ನೀಡಿರುವ ಸಂವಹನದ ಪ್ರಕಾರ ಎ. 22ರಿಂದ ಈ ಪ್ರಮಾಣಪತ್ರ ಅನ್ವಯವಾಗಲಿದೆ. ಅದಲ್ಲದೆ ವರದಿಯು ವಿಮಾನ ಯಾನ ಸಂಸ್ಥೆಯು ಅಂಗೀಕರಿಸಿದ ಆಸ್ಪತ್ರೆಗಳ ಕ್ಯೂರ್‌ಆರ್ ಕೋಡ್ ಹೊಂದಿರುವುದನ್ನು ಕೂಡಾ ಕಡ್ಡಾಯಗೊಳಿಸಿದೆ. ಹಾಗಾಗಿ ವಿದೇಶಕ್ಕೆ ಪ್ರಯಾಣಿಸುವವರು ತಮ್ಮ ಕೋವಿಡ್ ಟೆಸ್ಟ್ ವರದಿಯನ್ನು ಪಡೆಯುವ ಸಂಬಂಧ ತಾವು ಟೆಸ್ಟ್ ಮಾಡಿದ ಆಸ್ಪತ್ರೆಯ ಕ್ಯೂರ್‌ಆರ್ ಕೋಡ್ ಇರುವುದನ್ನು ಖಾತರಿಪಡಿಸುವ ಜತೆಗೆ ಆ ಲಿಂಕ್ ಓಪನ್ ಆಗುವುದನ್ನು ಪ್ರಯಾಣಕ್ಕೆ ಮುಂಚಿತವಾಗಿ ಸಮರ್ಪಕವಾಗಿ ಖಾತರಿಪಡಿಸಿಕೊಳ್ಳುವ ಮೂಲಕ ತಮಗಾಗಬಹುದಾದ ತೊಂದರೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.

‘‘ದುಬೈಗೆ ತೆರಳುವ ಪ್ರಯಾಣಿಕರಿಗೆ ಐಸಿಎಂಆರ್‌ನಿಂದ ನೀಡಲಾಗುವ ಕೋವಿಡ್ ಟೆಸ್ಟ್ ವರದಿಯಲ್ಲಿ ಆಸ್ಪತ್ರೆಯ ಕ್ಯೂರ್‌ಆರ್ ಕೋಡ್ ಕಡ್ಡಾಯಗೊಳಿಸಲಾಗಿದೆ. ಈ ಕ್ಯೂಆರ್ ಕೋಡ್ ಸ್ಕಾನ್ ಮಾಡಿದಾಗ ಟೆಸ್ಟ್ ಮಾಡಿಸಿದ ವ್ಯಕ್ತಿಯ ವರದಿಯ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಐಸಿಎಂಆರ್‌ನಿಂದ ನೀಡಲಾಗುವ ಕೋವಿಡ್ ವರದಿಗೆ ಸಂಬಂಧಪಟ್ಟ ಆಸ್ಪತ್ರೆಯ ಕ್ಯೂರ್‌ಆರ್ ಕೋಡ್ ಲಗತ್ತಿಸಿ ವರದಿಯನ್ನು ವಿದೇಶ ಪ್ರಯಾಣಕ್ಕೆ ಹೋಗುವವರಿಗೆ ನೀಡಲಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದು ತಾಂತ್ರಿಕ ವ್ಯವಸ್ಥೆಯಾಗಿದ್ದು, ಕೆಲ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇನ್ನೂ ಸರಿಯಾಗಿ ಆಗದ ಕಾರಣ ನಮ್ಮಲ್ಲಿ ಸಾಕಷ್ಟು ಪ್ರಯಾಣಿಕರು ಬರುತ್ತಿದ್ದಾರೆ’’

- ಡಾ. ಕಿಶನ್ ಶೆಟ್ಟಿ, ಮೆಡಿಕಲ್ ಸುಪರಿಂಟೆಂಡೆಂಟ್, ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X