ಮಾಸ್ಕ್: 58,850ರೂ. ದಂಡ ವಸೂಲಿ
ಉಡುಪಿ, ಎ.22: ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದ 588 ಮಂದಿಯಿಂದ ಎ.21ರಂದು 58,850ರೂ. ದಂಡ ವಸೂಲಿ ಮಾಡಲಾಗಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 3000ರೂ., ಗ್ರಾಪಂ ವ್ಯಾಪ್ತಿಯಲ್ಲಿ 6,400ರೂ., ಅಬಕಾರಿ ಇಲಾಖೆ ಯಿಂದ 1200ರೂ., ಕಂದಾಯ ಇಲಾಖೆಯಿಂದ 2950ರೂ., ಪೊಲೀಸ್ ಇಲಾಖೆಯಿಂದ 45,300ರೂ. ದಂಡವನ್ನು ವಸೂಲಿ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್ ಧರಿಸದ 31214 ಮಂದಿಯಿಂದ 33,03,900ರೂ. ದಂಡ ಸಂಗ್ರಹಿಸಲಾಗಿದೆ ಎಂದು ಉಡುಪಿ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
Next Story