ಲಂಚದ ಹಣ ಸಾಗಿಸುತ್ತಿದ್ದ ಎಫ್‍ಡಿಎ ಎಸಿಬಿ ಬಲೆಗೆ

ಬಾಗಲಕೋಟೆ, ಎ.23: ಆರೋಗ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ(ಎಫ್‍ಡಿಎ) ರೊಬ್ಬರು ಲಂಚದ ಹಣವನ್ನು ತೆಗೆದುಕೊಂಡು ಬಾಗಲಕೋಟೆ ನಗರದಲ್ಲಿ ಹೋಗುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಕಾರು ಸಮೇತ ಲಕ್ಷಾಂತರ ರೂ. ವಶಪಡಿಸಿಕೊಂಡಿದ್ದಾರೆ.
ಪ್ರಥಮ ದರ್ಜೆ ಸಹಾಯಕ ಮಹಾಂತೇಶ ವಿರುಪಾಕ್ಷ ನಿಡಸೂರ ಎಂಬವರು ಪರ್ಸೆಂಟೇಜ್ ಆಧಾರದಲ್ಲಿ ಅಕ್ರಮವಾಗಿ ಲಂಚದ ಹಣವನ್ನು ಸಂಗ್ರಹಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಕಾರಿನಲ್ಲಿ ಹೋಗುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಬಾಗಲಕೋಟೆ ಎಸಿಬಿ ಅಧಿಕಾರಿ ಸಮೀರ ಮುಲ್ಲಾ ನೇತೃತ್ವದಲ್ಲಿ ದಾಳಿ ನಡೆದಿದ್ದು 5,08,000 ರೂ. ಹಾಗೂ ಪ್ರಯಾಣ ಭತ್ತೆ ಬಿಲ್ಲುಗಳು, ಇತರ ದಾಖಲೆ ಪತ್ರ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





