ಉಡುಪಿ ನಗರಸಭೆ ಪೌರಕಾರ್ಮಿಕನಿಗೆ ಹಲ್ಲೆ: ದೂರು
ಉಡುಪಿ, ಎ.23: ಕಸ ವಿಲೇವಾರಿ ಮಾಡುವ ಉಡುಪಿ ನಗರಸಭೆಯ ಪೌರ ಕಾರ್ಮಿಕರಿಗೆ ಹಲ್ಲೆ ನಡೆಸಿರುವ ಘಟನೆ ಎ.22ರಂದು ಸಂಜೆ 5ಗಂಟೆ ಸುಮಾರಿಗೆ ಅಂಬಲಪಾಡಿ ಎಂಬಲ್ಲಿ ನಡೆದಿದೆ.
ಚಾಂತಾರು ಸುಮತಿ ಫಾರ್ಮ್ ಬಳಿ ನಿವಾಸಿ ಸುರೇಶ ಕೊರಗ(32) ಹಲ್ಲೆಗೆ ಒಳಗಾದ ಪೌರಕಾರ್ಮಿಕ. ಇವರು ತನ್ನ ಸಹಾಯಕ ಮಂಜು ಜೊತೆ ಅಂಬಲ ಪಾಡಿ ಬಳಿ ಕಸ ವಿಲೇವಾರಿ ವಾಹನವನ್ನು ಚಲಾಯಿಸಿಕೊಂಡು ಹೋಗುವಾಗ ಹಿಂದಿನಿಂದ ಬೈಕಿನಲ್ಲಿ ಬಂದ ಒಬ್ಬ ಯುವಕ ಹಾಗೂ ಇಬ್ಬರು ಯುವತಿಯರು, ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ಕೈಯಿಂದ ಹಲ್ಲೆ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





