ಮಂದಿರಕ್ಕೆ ನುಗ್ಗಿ ಸೊತ್ತು ಕಳವು
ಕಾರ್ಕಳ, ಎ.23: ಕೌಡೂರು ಗ್ರಾಮದ ಶ್ರೀರಾಮ ಮಂದಿರಕ್ಕೆ ಎ.22ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮಂದಿರದ ಕಬ್ಬಿಣದ ಶಟರ್ ಮುರಿದು ಒಳಪ್ರವೇಶಿಸಿದ ಕಳ್ಳರು, ಗರ್ಭ ಗುಡಿಯಲ್ಲಿ ದೇವರ ಫೋಟೋಗೆ ಹಾಕಿದ್ದ 75,000ರೂ. ಮೌಲ್ಯದ ಬೆಳ್ಳಿಯ ಹೂವಿನ ಆಭರಣ ಮತ್ತು ಕಾಣಿಕೆ ಡಬ್ಬಿ ಹಾಗೂ ಕಛೇರಿಯ ಡ್ರಾವರ್‌ನಲ್ಲಿದ್ದ 3000ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾ ಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





