ಕಾರ್ಕಳ, ಎ.23: ಮಾನಸಿಕ ಹಾಗೂ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ಇರ್ವತ್ತೂರು ಹೊಸಮಾರು ನಿವಾಸಿ ಸಂತೋಷ್ ಆಚಾರಿ (35) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.22ರಂದು ರಾತ್ರಿ ಮನೆಯ ಬಳಿಯ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.