ಬಾವಿಗೆ ಬಿದ್ದು ಮೃತ್ಯು
ಪಡುಬಿದ್ರಿ, ಎ.23: ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎ.20ರಿಂದ 23ರ ಮಧ್ಯಾವಧಿಯಲ್ಲಿ ಇನ್ನಾ ಗ್ರಾಮದ ಕಾಫಿನಾಡು ಎಂಬಲ್ಲಿ ನಡೆದಿದೆ.
ಮೃತರನ್ನು ಸುಧಾಕರ ಸಫಲಿಗ(41) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ವಿಪರೀತ ಕುಡಿತದ ಚಟ ಹೊಂದಿದ್ದರು. ಕೆಲಸಕ್ಕೆಂದು ಮನೆಯಿಂದ ಹೋದವರು ಆವರಣ ಗೋಡೆ ಇಲ್ಲದ ಬಾವಿಗೆ ಬಿದ್ದು ಮೃತ ಪಟ್ಟಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





