ಹರ್ಯಾಣ: ಆಮ್ಲಜನಕ ಸಾಗಿಸುತ್ತಿದ್ದ ಟ್ಯಾಂಕರ್ ನಾಪತ್ತೆ

ಸಾಂದರ್ಭಿಕ ಚಿತ್ರ
ಚಂಡಿಗಢ, ಎ. 23: ಹರ್ಯಾಣದ ಪಾಣಿಪತ್ನಿಂದ ಸಿರ್ಸಾಕ್ಕೆ ದ್ರವ ಆಮ್ಲಜನಕವನ್ನು ಸಾಗಿಸುತ್ತಿದ್ದ ಟ್ಯಾಂಕರ್ ನಾಪತ್ತೆಯಾಗಿದೆ. ಪಾಣಿಪತ್ನ ಸ್ಥಾವರದಿಂದ ಬುಧವಾರ ದ್ರವ ಆಮ್ಲಜನಕ ತುಂಬಿಸಿದ ಬಳಿಕ ಟ್ಯಾಂಕರ್-ಟ್ರಕ್ ಸಿರ್ಸಾಕ್ಕೆ ತೆರಳಿತ್ತು. ಆದರೆ, ಅದು ನಿಗದಿತ ಗುರಿ ತಲುಪಲಿಲ್ಲ ಎಂದು ಪಾಣಿಪಾತ್ ಮಾತೌಡಾ ಸ್ಟೇಷನ್ ಅಧಿಕಾರಿ ಮಂಜೀತ್ ಸಿಂಗ್ ಹೇಳಿದ್ದಾರೆ.
ಜಿಲ್ಲಾ ಔಷಧ ನಿಯಂತ್ರಕರು ನೀಡಿದ ದೂರಿನ ಆಧಾರದಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಟ್ಯಾಂಕರ್-ಟ್ರಕ್ ನಾಪತ್ತೆಯಾದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೋನ ಸೋಂಕಿಗೊಳಗಾದ ರೋಗಿಗಳಿಗೆ ಆಮ್ಲಜನಕ ಸಾಗಿಸುತ್ತಿದ್ದ ಟ್ಯಾಂಕರ್ ಪಾಣಿಪಾತ್ನಿಂದ ಫರೀದಾಬಾದ್ಗೆ ತೆರಳುತ್ತಿದ್ದ ಸಂದರ್ಭ ದಿಲ್ಲಿ ಸರಕಾರ ಕೊಳ್ಳೆ ಹೊಡೆದಿದೆ ಎಂದು ಹರ್ಯಾಣದ ಸಚಿವ ಅನಿಲ್ ವಿಜಿ ಆರೋಪಿಸಿದ್ದಾರೆ.
Next Story





