ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ
ಪಡುಬಿದ್ರಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿದೆ.
ಮೂಡುಫಲಿಮಾರಿನ ನಿವಾಸಿ ಸುಧಾಕರ ಸಫಲಿಗ (41) ಎಂಬವರ ಶವ ಮನೆಯ ಬಾವಿಯಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಗ್ಗೆ ಪಡುಬಿದ್ರಿ ಠಾಣೆಗೆ ದೂರು ನೀಡಲಾಗಿತ್ತು. ಕುಡಿತದ ಚಟ ಹೊಂದಿದ್ದ ಅವರು ಆಕಸ್ಮಿಕ ಕಾಲು ಜಾರಿ ಬಾವಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
ಮಾನವೀಯತೆ: ಬಾವಿಯಲ್ಲಿ ತೇಲುತಿದ್ದ ಶವವನ್ನು ಮೇಲಕೆತ್ತಲು ಯಾರೂ ಮುಂದೆ ಬಾರದಿದಾಗ ಆಸೀಫ್ ಆಪದ್ಬಾಂಧವ ಅವರಿಒಗೆ ಮಾಹಿತಿ ನೀಡಲಾಯಿತು. ಕೂಡಲೇ ಸ್ಥಳಿಕ್ಕೆ ಬಂದ ಆಸೀಫ್ ಶವ ಮೇಲಕೆತ್ತಲು ನೆರವಾಗುವ ಮೂಲಕ ಮಾನವೀಯೆತೆ ಮೆರೆದಿದ್ದಾನೆ.
Next Story





