ಸೋಮೇಶ್ವರ ದೇವಸ್ಥಾನದಕ್ಕೆ ಅಳವಡಿಸಲಾದ ಇಂಟರ್ ಲಾಕ್ ಉದ್ಘಾಟನೆ

ಉಳ್ಳಾಲ : ಸೋಮೇಶ್ವರ ಸೋಮನಾಥ ದೇವಸ್ಥಾನ ದ ರಾಜಗೋಪುರದ ಮುಂಭಾಗಕ್ಕೆ 15ಲಕ್ಷ ರೂ. ವೆಚ್ಚದಲ್ಲಿ ಅಳವಡಿಸ ಲಾದ ಇಂಟರ್ ಲಾಕ್ ಹಾಗೂ ಮೆಟ್ಟಿಲುಗಳನ್ನು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಫೇಸ್ ಶೀಲ್ಡ್ ವಿತರಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಡ್ವಕೇಟ್ ರವೀಂದ್ರನಾಥ ರೈ, ಸಮಿತಿ ಸದಸ್ಯರಾದ ಜನಾರ್ಧನ ಹೊಳ್ಳ, ರಾಮದಾಸ್, ಜಗದೀಶ್ ಉಚ್ಚಿಲ್ ಮೊದಲಾದವರು ಫೇಸ್ ಶೀಲ್ಡ್ ನ್ನು ಸ್ವೀಕರಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಮಹಿಳಾ ಘಟಕದ ಅಧ್ಯಕ್ಷೆ ದೇವಿಕಾ ಪೂಜಾರಿ, ಯುವಕಾಂಗ್ರೆಸ್ ನ ದೀಪಕ್ ಪಿಲಾರ್, ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಶೆಟ್ಟಿ, ಸದಾಶಿವ ಉಳ್ಳಾಲ್, ಕಿಶೋರ್ ಶೆಟ್ಟಿ, ಪುರುಷೋತ್ತಮ ಅಂಚನ್, ರಾಜೇಂದ್ರ ಉಳಿಯ, ಪದ್ಮನಾಭ ಕೊಣಾಜೆ, ಸುರೇಶ್ ಭಟ್ನಾಗರ್, ವಿಶಾಲ್ ಕೊಲ್ಯ, ರಾಮ ಸೋಮೇಶ್ವರ, ಅಚ್ಯುತ ಗಟ್ಟಿ, ಚಾಂದಿನಿ ಕೋಟೆಕಾರ್ , ರಹ್ಮಾನ್ ಕೊಣಾಜೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.







.jpeg)


