ಐಪಿಎಲ್: ಮುಂಬೈ ಮಣಿಸಿದ ಪಂಜಾಬ್ ಕಿಂಗ್ಸ್
ರಾಹುಲ್ ಆಕರ್ಷಕ ಅರ್ಧಶತಕ, ಶಮಿ, ರವಿಗೆ ತಲಾ 2 ವಿಕೆಟ್
ಚೆನ್ನೈ: ನಾಯಕ ಕೆ.ಎಲ್.ರಾಹುಲ್ ಹಾಗೂ ಕ್ರಿಸ್ ಗೇಲ್ ಸಾಹಸದ ನೆರವಿನಿಂದ ಶುಕ್ರವಾರ ಇಲ್ಲಿ ನಡೆದ ಐಪಿಎಲ್ ನ 17ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಗೆಲ್ಲಲು 132 ರನ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 17.4 ಓವರ್ ಗಳಲ್ಲಿ ಗೆಲುವಿನ ದಡ ಸೇರಿತು.
ರಾಹುಲ್(ಔಟಾಗದೆ 60, 52 ಎಸೆತ, 3 ಬೌಂಡರಿ, 3 ಸಿಕ್ಸರ್)ಹಾಗೂ ಕ್ರಿಸ್ ಗೇಲ್(ಔಟಾಗದೆ 43, 35 ಎಸೆತ, 5 ಬೌಂ, 2 ಸಿ.)2ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 79 ರನ್ ಗಳಿಸಿದರು. ಇನಿಂಗ್ಸ್ ಆರಂಭಿಸಿದ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ (25,20 ಎಸೆತ) ಮೊದಲ ವಿಕೆಟ್ ಗೆ 7.2 ಓವರ್ ಗಳಲ್ಲಿ 53 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡ ನಾಯಕ ರೋಹಿತ್ ಶರ್ಮಾ ಏಕಾಂಗಿ ಹೋರಾಟದ(63, 52 ಎಸೆತ, 5 ಬೌಂ, 2 ಸಿ.) ಹೊರತಾಗಿಯೂ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ (33, 27 ಎಸೆತ) ಹಾಗೂ ಕಿರೊನ್ ಪೊಲಾರ್ಡ್(ಔಟಾಗದೆ 16)ಎರಡಂಕೆಯ ಸ್ಕೋರ್ ಗಳಿಸಿದರು.
ಮುಹಮ್ಮದ್ ಶಮಿ(2-21) ಹಾಗೂ ರವಿ ಬಿಶ್ನೋಯ್(2-21)ತಲಾ ಎರಡು ವಿಕೆಟ್ ಗಳನ್ನು ಪಡೆದರು. ದೀಪಕ್(1-15), ಅರ್ಷದೀಪ್ ಸಿಂಗ್(1-28)ತಲಾ ಒಂದು ವಿಕೆಟ್ ಗಳನ್ನು ಪಡೆದು ಮುಂಬೈಯನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.