ಅಮೆರಿಕದ ಬೇಹು ವಿಮಾನ ಬೆನ್ನತ್ತಲು ಯುದ್ಧವಿಮಾನ ನಿಯೋಜಿಸಿದ ರಶ್ಯ
ಮಾಸ್ಕೋ (ರಶ್ಯ), ಎ. 23: ಪೆಸಿಫಿಕ್ ಸಾಗರದಲ್ಲಿ ರಶ್ಯ ಗಡಿಯತ್ತ ಬರುತ್ತಿದ್ದ ಅಮೆರಿಕದ ಬೇಹುಗಾರಿಕಾ ವಿಮಾನವೊಂದನ್ನು ಬೆನ್ನತ್ತಲು ರಶ್ಯ ಸೇನೆಯು ಮಿಗ್-31 ಯುದ್ಧ ವಿಮಾನವೊಂದನ್ನು ನಿಯೋಜಿಸಿದೆ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.
‘‘ಪೆಸಿಫಿಕ್ ಸಾಗರದ ಆಕಾಶದಲ್ಲಿ ಅಮೆರಿಕ ವಾಯುಪಡೆಯ ಆರ್‌ಸಿ-135 ಬೇಹುಗಾರಿಕಾ ವಿಮಾನವನ್ನು ರಶ್ಯ ಸೇನೆ ಗುರುತಿಸಿತು ಹಾಗೂ ಅದನ್ನು ತನ್ನ ಗಡಿಗಿಂತ ದೂರಕ್ಕೆ ಕಳುಹಿಸಿಕೊಟ್ಟಿತು’’ ಎಂದು ರಶ್ಯದ ಪೆಸಿಫಿಕ್ ಸಾಗರದಲ್ಲಿರುವ ನೌಕಾಪಡೆ ಘಟಕ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ.
ಅಮೆರಿಕ ವಿಮಾನವು ರಶ್ಯ ಗಡಿಗಿಂತ ಸಾಕಷ್ಟು ದೂರ ಹೋದ ಬಳಿಕ ರಶ್ಯದ ಯುದ್ಧ ವಿಮಾನವು ಹಿಂದಿರುಗಿತು ಎಂದಿದೆ.
Next Story





