ದಿಲ್ಲಿಯ ಮನೆಯೊಂದರಿಂದ 48 ಆಕ್ಸಿಜನ್ ಸಿಲಿಂಡರ್ ಗಳ ವಶ

ಹೊಸದಿಲ್ಲಿ: ದೇಶದಾದ್ಯಂತ ವೈದ್ಯಕೀಯ ಆಮ್ಲಜನಕದ ಕೊರತೆಯ ಮಧ್ಯ, ದಿಲ್ಲಿ ಮನೆಯೊಂದರಿಂದ 48 ಆಕ್ಸಿಜನ್ ಸಿಲಿಂಡರ್ ಗಳನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ.
ದಿಲ್ಲಿ ಪೊಲೀಸರ ತಂಡ ರಾಷ್ಟ್ರ ರಾಜಧಾನಿಯ ನೈರುತ್ಯ ಪ್ರದೇಶದ ಮನೆ ಮೇಲೆ ನಡೆಸಿದ ದಾಳಿಯಲ್ಲಿ 32 ದೊಡ್ಡ ಮತ್ತು 16 ಚಿಕ್ಕ ಆಮ್ಲಜನಕ ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದೆ.
ತಾನು ಕೈಗಾರಿಕಾ ಆಮ್ಲಜನಕದ ವ್ಯವಹಾರ ನಡೆಸುತ್ತಿರುವುದಾಗಿ ಹೇಳಿಕೊಂಡ ಮನೆಯ ಮಾಲೀಕ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿದೆ. 51 ವರ್ಷದ ಅನಿಲ್ ತನ್ನ ವ್ಯವಹಾರಕ್ಕಾಗಿ ಪಡೆದಿರುವ ಪರವಾನಗಿ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ದೊಡ್ಡ ಸಿಲಿಂಡರ್‌ಗಳಿಂದ ಆಮ್ಲಜನಕವನ್ನು ಸಣ್ಣ ಸಿಲಿಂಡರ್ ಗೆ ವರ್ಗಾಯಿಸಿದ ನಂತರ ಒಂದು ಸಣ್ಣ ಸಿಲಿಂಡರ್‌ನ್ನು, 12,500 ರೂ.ಗೆ ಮಾರಾಟ ಮಾಡುತ್ತಿದ್ದ.
ನ್ಯಾಯಾಲಯವು ಆದೇಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಸಿಲಿಂಡರ್‌ಗಳನ್ನು ಅಗತ್ಯವಿರುವವರಿಗೆ ಶನಿವಾರ ವಿತರಿಸಲಿದ್ದಾರೆ.
Next Story





