ಬಾಂಗ್ಲಾ: ರಾಸಾಯನಿಕ ಉಗ್ರಾಣಕ್ಕೆ ಬೆಂಕಿ; ಕನಿಷ್ಠ 4 ಸಾವು

ಢಾಕಾ (ಬಾಂಗ್ಲಾದೇಶ), ಎ. 23: ಬಾಂಗ್ಲಾದೇಶ ರಾಜಧಾನಿ ಢಾಕಾದ ರಾಸಾಯನಿಕ ಉಗ್ರಾಣವೊಂದರಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಅವಗಢ ಸಂಭವಿಸಿದ್ದು, ಮಹಿಳೆಯೋರ್ವರು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಹಾಗೂ 23 ಮಂದಿ ಗಾಯಗೊಂಡಿದ್ದಾರೆ.
ಹಳೆ ಢಾಕಾದ ಅರ್ಮನಿಟೋಲ ಪ್ರದೇಶದಲ್ಲಿರುವ ಕಟ್ಟಡದ ನೆಲ ಮಹಡಿಯಲ್ಲಿ ಮುಂಜಾನೆ ಸುಮಾರು 3 ಗಂಟೆ ಹೊತ್ತಿಗೆ ಬೆಂಕಿ ಹೊತ್ತಿಕೊಂಡಿತು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮಹ್ಫೂಝ್ ರಿಬೆನ್ ‘ಢಾಕಾ ಟ್ರಿಬ್ಯೂನ್’ಗೆ ತಿಳಿಸಿದರು.
ಕಟ್ಟಡದ ನೆಲಮಹಡಿಯಲ್ಲಿ ಹಲವಾರು ದಹನಶೀಲ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಅವರು ಹೇಳಿದರು.
20 ಅಗ್ನಿಶಾಮಕ ವಾಹನಗಳು ಬೆಳಗ್ಗೆ 6 ಗಂಟೆಯ ವೇಳೆಗೆ ಬೆಂಕಿಯನ್ನು ಹತೋಟಿಗೆ ತಂದವು.
Next Story





