ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ; ವಶ

ಮಂಗಳೂರು, ಎ. 24: ದುಬೈನಿಂದ ಅಡುಗೆ ಪರಿಕರಗಳು, ಗ್ಯಾಸ್‌ಲೈಟರ್, ಎಂಪಿ 3 ಪ್ಲೇಯರ್ ಮತ್ತು ಇಯರ್‌ಫೋನ್‌ಗಳೆಡೆಯಲ್ಲಿ ಬಚ್ಚಿಟ್ಟು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಏರ್ ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ತೆ ಹಚ್ಚಿದ್ದಾರೆ.
ಕಾಸರಗೋಡು ಜಿಲ್ಲೆಯ ಕೂಡ್ಲು ಸಮೀಪದ ಅಬ್ದುಲ್ ರಹೀಂ ಏರಿಯಲ್ ಜಾಫರ್ ಬಂಧಿತ ಆರೋಪಿ. ಈತನಿಂದ ಸುಮಾರು 9.6 ಲಕ್ಷ ರೂ. ಮೌಲ್ಯದ 196 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳಾದ ಪ್ರವೀಣ್ ಕಂಡಿ, ನಾಗೇಶ್ ಕುಮಾರ್, ನವೀನ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
Next Story





